ಒಡಿಶಾ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀತ್ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅರಿವಿಗಿಂತ ಪವಿತ್ರವಾದದ್ದು ಬೇರೊಂದಿಲ್ಲ ಎಂಬುದನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ಚೇತನ, ತಾಂತ್ರಿಕ ಕೌಶಲದ ಮೇರು ಪ್ರತಿಭೆ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರಾಗಿದ್ದು, ಅವರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು ಎಂದು ಒಡಿಶಾ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀತ್ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಹಾಗೂ ಇಂಜಿನಿಯರ್ಸ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸರ್.ಎಂ.ವಿ. ಅವರ ಶಿಸ್ತು, ಸಂಯಮ ಮತ್ತು ಅವಿರತ ಾನದಾಹ ಸರ್ವರಿಗೂ ಪ್ರೇರಣೆ. ಪುಸ್ತಕಗಳ ಅಪಾರ ವ್ಯಾಮೋಹ ಹೊಂದಿದ್ದ ಅವರು ಡಿವಿಜಿ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು ಹಾಗೂ ಕನ್ನಡ ಭಾಷೆಯ ಮೇಲೆ ಅಪಾರ ಒಲವು ಇಟ್ಟುಕೊಂಡಿದ್ದರು ಎಂದರು.
ಮದಗದ ಕೆರೆ, ಬಾಚಣಿಕೆ ಅಣೆಕಟ್ಟು ಸೇರಿದಂತೆ ಬ್ರಿಟನ್ನ ಥೇಮ್ಸ್ ನದಿಯ ಅಣೆಕಟ್ಟು ನಿರ್ಮಾಣದಲ್ಲಿ ಅವರ ತಂತ್ರಾನ ಇಂದಿಗೂ ವಿಸ್ಮಯಕಾರಿಯಾಗಿದೆ. ಕೆಆರ್ಎಸ್ ನಿರ್ಮಾಣದ ವೇಳೆ ಅವರು ಅನುಸರಿಸಿದ ಕಟ್ಟುನಿಟ್ಟಿನ ನಿಯಮಗಳು ಲಾಂತರ ಎಕರೆ ಕೃಷಿ ಭೂಮಿಗೆ ಹಸಿರು ಹೊದಿಸಿ, ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದವು ಎಂದು ಸ್ಮರಿಸಿದರು.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮಾತನಾಡಿ, ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ವಿಶ್ವೇಶ್ವರಯ್ಯನವರ ಕಾರ್ಯಶೈಲಿ ಇಂದಿಗೂ ದಿಕ್ಸೂಚಿ. ಇಂಜಿನಿಯರ್ಗಳು ಕೇವಲ ಕಚೇರಿಗಳಲ್ಲಿ ಕುಳಿತುಕೊಳ್ಳದೆ, ಕಾಮಗಾರಿ ನಡೆಯುವ ಸ್ಥಳದಲ್ಲೆ ಹಾಜರಿದ್ದು ಕಾರ್ಯನಿರ್ವಹಿಸಿದರೆ ಮಾತ್ರ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಇದೇ ವೇಳೆ ವೃತ್ತಿರಂಗದಲ್ಲಿ ಗಣನೀಯ ಸಾಧನೆ ತೋರಿದ ಇಂಜಿನಿಯರ್ಸ್ಗಳಿಗೆ ಸರ್. ಎಂ.ವಿ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತರಾದ ಕೆ. ನಿತೀಶ್, ಆರ್. ವೆಂಕಟಾಚಲಪತಿ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ನೌಕರರ ೇಮಾಭಿವೃದ್ಧಿ ಸಂದ ಅಧ್ಯ ಎ. ಅಮೃತ್ ರಾಜ್ ಉಪಸ್ಥಿತರಿದ್ದರು.
ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಅಡಿಯಲ್ಲಿ ಹಲವು ಉಪಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.