ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ-&ಖಾತಾ ಸೇವೆಗಳನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ನೂತನ "ಇ-ಆಸ್ತಿ 2.0' ವ್ಯವಸ್ಥೆ ಸೆ.21ರಿಂದ ಜಾರಿಗೆ ಬರಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ (ಸೆ.21) ನೂತನ ವ್ಯವಸ್ಥೆಯನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಿದ್ದಾರೆ. ಈಗಾಗಲೇ 25 ಲಕ್ಷಕ್ಕೂ ಅಧಿಕ ಇ-&ಖಾತಾಗಳನ್ನು ಆನ್ಲೈನ್ ಮೂಲಕ ವಿತರಿಸಿರುವ "ಇ-ಆಸ್ತಿ' ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿರುವ "ಇ-ಆಸ್ತಿ 2.0' ಅನ್ನು ನಾಗರಿಕರಿಗೆ ಸುಲಭ, ವೇಗದ ಹಾಗೂ ಪಾರದರ್ಶಕ ಸೇವೆ ಒದಗಿಸುವಂತೆ ರೂಪಿಸಲಾಗಿದೆ.
ನೂತನ ವ್ಯವಸ್ಥೆಯಲ್ಲಿ ಸಂಪೂರ್ಣ ಇ-&ಖಾತಾ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳೀಕರಣಗೊಂಡಿದ್ದು, ಹಲವು ಸೇವೆಗಳನ್ನು ಸ್ವಯಂಚಾಲಿತಗೊಳಿಸಲಾಗಿದೆ. ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಆನ್ಲೈನ್ನಲ್ಲೇ ನೈಜ ಸಮಯದಲ್ಲಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ.
ಏಕೀಕೃತ ಸೇವೆ:
ಪ್ರಮುಖ ಇ-&ಖಾತಾ ಹಾಗೂ ಆಸ್ತಿ ಸಂಬಂಧಿತ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದಾಗಿದೆ. ಖಾತಾ ಮ್ಯೂಟೇಷನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕಾವೇರಿ ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಸರಳ ಹಾಗೂ ಬಳಕೆದಾರ ಸ್ನೇಹಿ ವಿನ್ಯಾಸ ಹೊಂದಿರುವ ನೂತನ ವೇದಿಕೆ ಮೂಲಕ ಅರ್ಜಿಗಳ ಪ್ರಗತಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು.
ಸೆ.21ರಿಂದ ಲಭ್ಯ
* ಡ್ರಾಫ್ಟ್ ಇ-&ಖಾತಾವನ್ನು ಅಂತಿಮ ಇ-&ಖಾತಾವಾಗಿ ಪರಿವರ್ತನೆ
* ಮ್ಯೂಟೇಷನ್ನೊಂದಿಗೆ ಅಂತಿಮ ಇ-&ಖಾತಾ ವಿತರಣೆ
* ಕಾವೇರಿ&ಮ್ಯೂಟೇಷನ್ ಏಕೀಕರಣ
* ಅರ್ಜಿಯ ಸ್ಥಿತಿಯನ್ನು ನೈಜ ಸಮಯದಲ್ಲಿ ಆನ್ಲೈನ್ ಮೂಲಕ ಪರಿಶೀಲನೆ
* ಬಿ&-ಖಾತಾದಿಂದ ಎ&-ಖಾತಾಗೆ ಪರಿವರ್ತನೆ
ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ
ಮುಂದಿನ ಕೆಲವು ದಿನಗಳಲ್ಲಿ ಹೊಸ ಖಾತಾ ನೋಂದಣಿ, ಅಪಾರ್ಟ್ಮೆಂಟ್ಗಳು ಹಾಗೂ ಬಹುಮಹಡಿ ಕಟ್ಟಡಗಳಿಗೆ ಬಲ್ಕ್ ಖಾತಾ ಪ್ರಕ್ರಿಯೆ, ಅಂತಿಮ ಇ-&ಖಾತಾದಲ್ಲಿನ ತಿದ್ದುಪಡಿ, ನಿವೇಶನ ವಿಭಜನೆ ಹಾಗೂ ವಿಲೀನ ಸೇವೆಗಳನ್ನು ಹಂತಹಂತವಾಗಿ ಆರಂಭಿಸಲಾಗುವುದು ಎಂದು ಜಿಬಿಎ ತಿಳಿಸಿದೆ.
ನಾಗರಿಕರಿಗೆ ಡಿಜಿಟಲ್ ಮೂಲಕ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ "ಇ-&ಆಸ್ತಿ 2.0' ಮಹತ್ವದ ಹೆಜ್ಜೆಯಾಗಿದ್ದು, ನೂತನ ವ್ಯವಸ್ಥೆಗೆ ಬದಲಾಗುವ ಸಂದರ್ಭದಲ್ಲಿ ನಾಗರಿಕರು ಸಹಕಾರ ನೀಡಬೇಕು.