ಬೆಂಗಳೂರಲ್ಲಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಅನುಮತಿ ಇಲ್ಲದೆ ಪ್ರತಿಷ್ಠಾಪನೆಗೆ ಅವಕಾಶವಿಲ್ಲ
  • ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಬಿಎ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಾಗರಿಕ ಹಾಗೂ ಪೊಲೀಸ್​ ವ್ಯವಸ್ಥೆ ಕಟ್ಟೆಚ್ಚರ ವಹಿಸಿದೆ.
ಸೋಮವಾರ (ಸೆ.14)ದಿಂದ ಗಣೇಶ ಚತುರ್ಥಿ ಆರಂಭವಾಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿ ಪ್ರಕ್ರಿಯೆ ಸರಳಗೊಳಿಸಲು ಉಪವಿಭಾಗ ಮಟ್ಟದಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಪೊಲೀಸ್​, ಪಾಲಿಕೆ, ಬೆಸ್ಕಾಂ, ಅಗ್ನಿಶಾಮಕ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಅರ್ಜಿ ಪರಿಶೀಲಿಸಲಿದ್ದಾರೆ.
ನಗರದಾದ್ಯಂತ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ಸೇರಿ ಗಣೇಶೋತ್ಸವ ಆಚರಣೆಗಳಿಗೆ ನಿಯಮಗಳನ್ನು ಜಾರಿ ಮಾಡಿದ್ದು, ನಿಯಮಗಳ ಉಲ್ಲಂಘಿಸಿದಲ್ಲಿ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ. ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳ ಬಳಕೆಗೆ ಒತ್ತು ನೀಡಲಾಗಿದೆ.
ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್​ ನಿಮಾರ್ಣಕ್ಕೂ ಅಗತ್ಯ ಅನುಮತಿ ಕಡ್ಡಾಯ ಮಾಡಲಾಗಿದೆ. ರಸ್ತೆ, ಪಾದಚಾರಿ ಮಾರ್ಗ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪೆಂಡಾಲ್​ ಅಥವಾ ಮೆರವಣಿಗೆ ಆಯೋಜಿಸುವಂತಿಲ್ಲ. ಧ್ವನಿವರ್ಧಕ ಬಳಕೆಗೆ ನಿಗದಿತ ಸಮಯ ಹಾಗೂ ಶಬ್ದಮಿತಿಯನ್ನು ಪಾಲಿಸಬೇಕು. ಮೆರವಣಿಗೆಗೆ ಪೂರ್ವಾನುಮತಿ ಪಡೆದು ನಿಗದಿತ ಮಾರ್ಗದಲ್ಲೇ ಸಾಗಬೇಕೆಂದು ಪೊಲೀಸರು ಖಡಕ್​ ಎಚ್ಚರಿಕೆ ನೀಡಿದ್ದಾರೆ. 
ವಿಸರ್ಜನಾ ಕೇಂದ್ರಗಳಲ್ಲಿ ಸಿಸಿಟಿವಿ, ಕ್ರೇನ್​, ಆಂಬುಲೆನ್ಸ್​, ಪ್ರಥಮ ಚಿಕಿತ್ಸೆ, ಕುಡಿಯುವ ನೀರು ಹಾಗೂ ಮೊಬೈಲ್​ ಶೌಚಗೃಹಗಳ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಮೂರ್ತಿಗಳಿಗಾಗಿ ವಾರ್ಡ್​ ಮತ್ತು ವಿಧಾನಸಭಾ ಕ್ಷೇತ್ರವಾರು ವಿಸರ್ಜನಾ ಸ್ಥಳ ಗುರುತಿಸಲಾಗಿದ್ದು, ತರಬೇತಿ ಪಡೆದ ಈಜುಗಾರರನ್ನು ನಿಯೋಜಿಸಲಾಗಿದೆ. 10 ಅಡಿಕ್ಕಿಂತ ಎತ್ತರದ ಮೂರ್ತಿಗಳನ್ನು ಕಲ್ಯಾಣಿಗಳಲ್ಲಿ ವಿಸರ್ಜಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಸಿದ್ಧತೆಗಳೇನು?
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ವಿಸರ್ಜನೆಗೆ ಅನುಕೂಲವಾಗುವಂತೆ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 42 ಕೆರೆ ಅಂಗಳದ ಅಥವಾ ತಾತ್ಕಾಲಿಕ ಕಲ್ಯಾಣಿಗಳು ಹಾಗೂ ವಾರ್ಡ್​ವಾರು 659 ಮೊಬೈಲ್​ ಟ್ಯಾಂಕ್​ಗಳ ವ್ಯವಸ್ಥೆ ಮಾಡಿದೆ. 
ಅದೇ ರೀತಿ, ಸಾರ್ವಜನಿಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಅನುಮತಿಗಳನ್ನು ಸುಗಮವಾಗಿ ಪಡೆಯಲು ಐದೂ ಪಾಲಿಕೆಗಳು ಒಟ್ಟು 122 ಏಕಗವಾ ಕೇಂದ್ರಗಳನ್ನು ಸ್ಥಾಪಿಸಿವೆ. ಪಶ್ವಿಮದಲ್ಲಿ 22, ಕೇಂದ್ರ&24, ಪೂರ್ವ&17, ಉತ್ತರ&30 ಹಾಗೂ ದಣದಲ್ಲಿ 29 ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಮಾರ್ಗದರ್ಶನ ನೀಡಲು ಮತ್ತು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಲು ನೋಡಲ್​ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ.
ವಿಸರ್ಜನಾ ಸ್ಥಳಗಳು, ಮೊಬೈಲ್​ ಟ್ಯಾಂಕ್​ಗಳು, ಏಕಗವಾ ಕೇಂದ್ರಗಳು ಹಾಗೂ ಸಂಬಂಧಿತ ವ್ಯವಸ್ಥೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಕ್ಯೂಆರ್​ ಕೋಡ್​ ಸ್ಕಾ$ನ್​ ಮಾಡುವ ಮೂಲಕ ಅಥವಾ ಜಿಬಿಎ ವೆಬ್​ಸೈಟ್​ ಜಠಿಠಿಟಠ://ಚಟಟಠ.ಚಿಚಿಞಟ.ಜಟಡ.ಜ್ಞಿ/ಜಚ್ಞಛಿಠಜಚ2026 ನಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಬಿಎ ತಿಳಿಸಿದೆ.
ದೇಗುಲಗಳಲ್ಲಿ ಹಬ್ಬದ ವಾತಾವರಣ
ನಗರದ ಪ್ರಮುಖ ದೇವಾಲಯಗಳಾದ ಬಸವನಗುಡಿ ದೊಡ್ಡಗಣಪತಿ, ಜೆ.ಪಿ. ನಗರದ ಸತ್ಯ ಗಣಪತಿ, ಕೆಂಗೇರಿ ಪಂಚಮುಖಿ ಗಣಪತಿ ಹಾಗೂ ಇತರ ಗಣಪತಿ ದೇವಸ್ಥಾನಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಭಾನುವಾರವೇ ದೇಗುಲದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಡಿಜೆ ನಿಷೇಧ, ಸ್ವಯಂಸೇವಕರ ಲಿಸ್ಟ್​!
ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್​ ಇಲಾಖೆ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಪೊಲೀಸ್​ ಇಲಾಖೆ ನಿಗದಿ ಮಾಡಿದ ಸಮಯ ಮೀರುವಂತೆ ಇಲ್ಲ. ಸುಪ್ರೀಂ ಕೋರ್ಟ್​ ಆದೇಶದಂತೆ ಯಾವುದೇ ಡಿಜೆ ಬಳಕೆ ಮಾಡಲು ಅವಕಾಶ ಇಲ್ಲ. ನಿಗದಿತ ಡಿಸಿಬಲ್​ ಸೌಂಡ್​ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಆಯೋಜಕರ ಬಳಿ ಪೊಲೀಸರು ಸ್ವಯಂಸೇವಕರ ಲಿಸ್ಟ್​ ಕೂಡ ಕೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net