ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ 50 ದಿನ

ಜಿಬಿಎ
ಜಿಬಿಎ
Published on

ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ (ಆ. 19) 50 ದಿನ ಪೂರೈಸಲಿದ್ದು,  ಈವರೆಗೆ 5 ಪಾಲಿಕೆಗಳಿಂದ ಒಟ್ಟಾರೆ 960.58 ಕಿ.ಮೀ. ಉದ್ದದ ುಟ್​ಪಾತ್​ ಅತಿಕ್ರಮಣವನ್ನು ಮುಕ್ತಗೊಳಿಸಲಾಗಿದೆ. 

ಕೇಂದ್ರ ಪಾಲಿಕೆಯು ಈ ಕಾರ್ಯಾಚರಣೆಯಲ್ಲಿ ಮುಂದಿದ್ದು, ಇದುವರೆಗೆ 235.75 ಕಿ.ಮೀ. ರಸ್ತೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿದೆ. ಉತ್ತರ ಪಾಲಿಕೆ 219.35 ಕಿ.ಮೀ., ಪೂರ್ವ ಪಾಲಿಕೆ 172.55 ಕಿ.ಮೀ. ರಸ್ತೆಯಲ್ಲಿ ಒತ್ತುವರಿಯನ್ನು ತೆರವುಗೊಳಿಸಿದೆ. ಐದು ಪಾಲಿಕೆಗಳಿಂದ 3,286 ಪೆಟ್ಟಿ ಅಂಗಡಿ, 3,698 ತಳ್ಳುಗಾಡಿ, 4,524 ಎಸಿ ಶೀಟ್ಸ್​ ಪೊಜೆನ್​/ ಕ್ಯಾನೊಪಿ, 4,061 ಮೆಟ್ಟಿಲು ಮತ್ತು ರ್ಯಾಂಪ್​, 6,328 ಜಾಹೀರಾತು ಪಿಲ್ಲರ್​ ಮತ್ತು ಬೋರ್ಡ್​, 529 ತಾತ್ಕಾಲಿಕ ಶೆಡ್​ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 4,490.35 ಟನ್​ನಷ್ಟು ನಿರ್ಮಾಣ ಮತ್ತು ಮಣ್ಣು ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗಿದೆ. 42 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಲಾಗಿದೆ ಎಂದು ಜಿಬಿಎ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net