ರಾಜಧಾನಿಗೆ ಎತ್ತಿನಹೊಳೆ ನೀರು ಲಭಿಸುವ ಕಾಲ ಸನ್ನಿಹಿತ | BWSSB

ಟಿ.ಜಿ.ಹಳ್ಳಿ ಜಲಾಶಯ
ಟಿ.ಜಿ.ಹಳ್ಳಿ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ಟಿ.ಜಿ. ಹಳ್ಳಿ ಜಲಾಶಯದಲ್ಲಿ ಎಸ್​ಟಿಪಿ ಮೊದಲ ಹಂತ ಪೂರ್ಣ
  • 291 ಕೋಟಿ ರೂ. ವೆಚ್ಚದಲ್ಲಿ ಜಲಶುದ್ಧೀಕರಣ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ರಾಜಧಾನಿ ಸೇರಿ ಬಯಲುಸೀಮೆಯ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಪೂರೈಕೆ ಕನಸು ನನಸಾಗುವ ಕಾಲ ಸಮೀಪಿಸುತ್ತಿದೆ. ಬೆಂಗಳೂರು ಜಲಮಂಡಳಿಯು ಮಹತ್ವಾಕಾಂ ಯೋಜನೆಯ ಭಾಗವಾಗಿ ತಿಪ್ಪಗೊಂಡನಹಳ್ಳಿ (ಟಿ.ಜಿ. ಹಳ್ಳಿ) ಜಲಾಶಯ ಜಲಶುದ್ಧೀಕರಣ ಘಟಕ ಹಾಗೂ ತ್ಯಾಜ್ಯನಿರು ಸಂಸ್ಕರಣಾ ಘಟಕಗಳ (ಎಸ್​ಟಿಪಿ) ಮೊದಲನೇ ಹಂತದ ಪುನ@ಶ್ಚೇತನ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.
ಎತ್ತಿನಹೊಳೆ ಯೋಜನೆಯಡಿ ಬೆಂಗಳೂರು ನಗರಕ್ಕೆ 2.5 ಟಿಎಂಸಿ ನೀರನ್ನು ನಿಗದಿ ಮಾಡಿದ್ದು, ಇದರಲ್ಲಿ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮತ್ತು 0.8 ಟಿಎಂಸಿ ನೀರನ್ನು ಹೆಸರಘಟ್ಟ ಜಲಾಶಯಕ್ಕೆ ಹಂಚಿಕೆ ಮಾಡಲಾಗಿದೆ. ಈ ಕಾಮಗಾರಿಯು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ತಾವರೆಕೆರೆ ಜಲರೇಚಕ ಯಂತ್ರಾಗಾರದವರೆಗೆ ಈಗಾಗಲೆ ಅನುಷ್ಠಾನಗೊಂಡಿದ್ದು, ಎತ್ತಿನಹೊಳೆ ಯೋಜನೆಯಿಂದ ನೀರು ಪೂರೈಕೆಯಾದ ಕೂಡಲೇ ಜಲಶುದ್ಧೀಕರಣ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ.
ಯೋಜನೆಯ ಭಾಗವಾಗಿ 110 ಎಂಎಲ್​ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಟಕದ ನಿರ್ಮಾಣ, 20 ಎಂಎಲ್​ಡಿ ಸಾಮರ್ಥ್ಯದ ತ್ಯಾಜ್ಯನಿರು ಸಂಸ್ಕರಣಾ ಟಕದ ನಿರ್ಮಾಣ ಹಾಗೂ ಜಲರೇಚಕ ಯಂತ್ರಾಗಾರಗಳ ಮತ್ತು ಪಂಪಿಂಗ್​ ಮುಖ್ಯ ಕೊಳವೆಗಳ ಜೋಡಣೆ (ಟಿ.ಜಿ. ಹಳ್ಳಿಯಿಂದ ಬೆಂಗಳೂರಿಗೆ) ಕಾಮಗಾರಿ ಪೂರ್ಣಗೊಂಡಿವೆ.
ಟಿ.ಜಿ. ಹಳ್ಳಿ ಜಲಾಶಯ ಸಂಪೂರ್ಣ ನಿರುಪಯೋಗವಾಗಿದ್ದ ಹಿನ್ನೆಲೆಯಲ್ಲಿ 2019ರಲ್ಲಿ ಅದರ ಪುನ@ಶ್ಚೇತನ ಕಾಮಗಾರಿಯನ್ನು 291 ಕೋಟಿ ರೂ. ವೆಚ್ಚದಲ್ಲಿ ಗುತ್ತಿಗೆ ಆಧಾರದಲ್ಲಿ ಜಲಮಂಡಳಿ ಕೈಗೆತ್ತಿಕೊಂಡಿತ್ತು. ಇದರಲ್ಲಿ ಕಾಮಗಾರಿ ವೆಚ್ಚ ಹಾಗೂ ಹತ್ತು ವರ್ಷ ಕಾರ್ಯಾಚರಣೆ ಮತ್ತು ನಿರ್ವಹಣೆಯ ವೆಚ್ಚವೂ ಒಳಗೊಂಡಿದೆ. ಹಲವು ಗಡುವುಗಳ ಬಳಿಕ 2024ರಲ್ಲಿ ಜಲಾಶಯದಿಂದ ತಾವರೆಕೆರೆ ಜಲರೇಚಕ ಯಂತ್ರಾಗಾರದವರೆಗೆ ಕಾಮಗಾರಿ ಪೂರ್ಣಗೊಂಡಿದ್ದರೂ, ಎತ್ತಿನಹೊಳೆ ನೀರು ಇನ್ನೂ ಲಭ್ಯವಾಗದ ಕಾರಣ ಕಾವೇರಿ ನೀರನ್ನು 1:20 ಅನುಪಾತದಲ್ಲಿ ಮಿಶ್ರಣ ಮಾಡಿ ಜಲಾಶಯದಿಂದ ಪಂಪ್​ ಮಾಡಬೇಕಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಜತೆ ಸಮಾಲೋಚನೆ ನಡೆಸಿ ಈ ತೀಮಾರ್ನ ಕೈಗೊಳ್ಳಲಾಗಿದ್ದು, ಕಾರ್ಯನಿರ್ವಹಣೆಯಲ್ಲಿರಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆರಂಭದಲ್ಲಿ ನೀರಿನ ಗುಣಮಟ್ಟದ ಬಗ್ಗೆ ಆತಂಕ ಇದ್ದರೂ ಐಐಎಸ್​ಸಿ ಯೋಜನೆಯನ್ನು ಅನುಮೋದಿಸಿದ ಬಳಿಕ ಅಗತ್ಯ ಪರೀಕ್ಷೆಗಳ ಮೂಲಕ ನೀರಿನ ಗುಣಮಟ್ಟ ತೃಪ್ತಿಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
110 ಎಂಎಲ್​ಡಿ ಶುದ್ಧೀಕೃತ ನೀರು
1970ರ ದಶಕದಲ್ಲಿ ಪ್ರಮುಖ ನೀರಿನ ಮೂಲವಾಗಿದ್ದ ಟಿ.ಜಿ. ಹಳ್ಳಿ ಜಲಾಶಯವು 2012ರ ವೇಳೆಗೆ ಸಂಪೂರ್ಣವಾಗಿ ಒಣಗಿಹೋಗಿತ್ತು. ಇದೀಗ ನಗರ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಸರೆಯಾಗಿದ್ದು, ಎತ್ತಿನಹೊಳೆ ಯೋಜನೆಯಿಂದ ಜಲಾಶಯಕ್ಕೆ 1.7 ಟಿಎಂಸಿ ನೀರು ಲಭ್ಯವಾಗುವ ನಿರೀಕ್ಷೆಯಿದೆ. ಇದರ ಮೂಲಕ ಪಶ್ಚಿಮ ಬೆಂಗಳೂರಿಗೆ ದಿನಕ್ಕೆ 110 ಎಂಎಲ್​ಡಿ ಶುದ್ಧೀಕೃತ ನೀರು ಪಂಪ್​ ಮಾಡಲು ಸಾಧ್ಯವಾಗಲಿದೆ.
ಓಜೋನೇಷನ್​ ತಂತ್ರಜ್ಞಾನ ಬಳಕೆ
ಅರ್ಕಾವತಿ ನದಿ ತೀರದ ಸುತ್ತಮುತ್ತಲಿನ ವಸತಿಗಳಿಂದ ಮಾಲಿನ್ಯ ಸಂಭವಿಸಬಹುದೆಂಬ ಶಂಕೆಯಿಂದ, ಮೊದಲ ಬಾರಿಗೆ ಟಿ.ಜಿ. ಹಳ್ಳಿ ಜಲಾಶಯದಲ್ಲಿ ಓಜೋನೇಷನ್​ ತಂತ್ರಜ್ಞಾನವನ್ನು ಜಲಮಂಡಳಿ ಅಳವಡಿಸಿದೆ. ಈ ವಿಧಾನದಲ್ಲಿ ಉಚ್ಚ ವೋಲ್ಟೇಜ್​ ವಿದ್ಯುತ್​ ಸಹಾಯದಿಂದ ಓಜೋನ್​ ಅನ್ನು ನೀರಿಗೆ ಸೇರಿಸಲಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್​ಗಳು ನಾಶವಾಗಿ ನೀರು ಶುದ್ಧೀಕರಣಗೊಳ್ಳುತ್ತದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಜಲಶುದ್ಧೀಕರಣ ಘಟಕ ಹಾಗೂ ಎಸ್​ಟಿಪಿ ಘಟಕಗಳ ಮೊದಲನೇ ಹಂತದ ಪುನ@ಶ್ಚೇತನ ಕಾಮಗಾರಿ ಪೂರ್ಣಗೊಂಡಿದೆ. ಎತ್ತಿನಹೊಳೆ ಯೋಜನೆಯಿಂದ ಶ್ರೀ ನೀರು ಪೂರೈಕೆಯಾಗುವ ನಿರೀೆ ಇದ್ದು, ಬಳಿಕ ಜಲಶುದ್ಧೀಕರಣ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳಿಸಲಾಗುವುದು. ಸದ್ಯ ಕಾವೇರಿ ನೀರನ್ನು ಮಿಶ್ರಣ ಮಾಡಿ ಜಲಾಶಯದಿಂದ ಪಂಪ್​ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net