ಈಜೀಪುರ ಮೇಲ್ಸೇತುವೆ ಕಾಮಗಾರಿ ವರ್ಷಗಳಿಂದ ವಿಳಂಬವಾಗುತ್ತಿರುವ ಪರಿಣಾಮ ಸ್ಥಳಿಯ ವ್ಯಾಪಾರಿಗಳಿಗೂ ಹೊಡೆತ ಬಿದ್ದಿದೆ. ಕಾಮಗಾರಿ ಪ್ರದೇಶದ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಗ್ರಾಹಕರ ಓಡಾಟ ಕಡಿಮೆಯಾಗಿದ್ದು, ಅನೇಕ ಅಂಗಡಿಗಳ ವಹಿವಾಟು ಕುಸಿದಿದೆ. ಮತ್ತೊಂದೆಡೆ, ನಿರಂತರ ಧೂಳು, ಶಬ್ದ ಹಾಗೂ ಪರ್ಯಾಯ ರಸ್ತೆಗಳ ಕೊರತೆಯಿಂದ ನಿವಾಸಿಗಳು ದೈನಂದಿನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲುವುದು ಹಾಗೂ ವಾಹನಗಳ ನಿಧಾನಗತಿಯ ಸಂಚಾರದಿಂದ ಅಪಘಾತದ ಸಾಧ್ಯತೆಯೂ ಹೆಚ್ಚುತ್ತಿದೆ. ಹೀಗಾಗಿ ಕೇವಲ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ದಿನನಿತ್ಯ ಕಾಮಗಾರಿ ಪ್ರಗತಿಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿ, ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವುದು ಅಧಿಕಾರಿಗಳ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ಜನ ಅಭಿಪ್ರಾಯಟ್ಟಿದ್ದಾರೆ.