ಪ್ರತಿದಿನ ಸಂಚರಿಸುವ ಕೆಲವರು, ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಪ್ರಯಾಣ ಸಮಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಕುವೆಂಪುನಗರ, ಉಡುಪಿ ಗಾರ್ಡನ್, ಜಯದೇವ, ಈಸ್ಟ್ ಎಂಡ್ ಸೇರಿ ಹಲವು ಜಂಕ್ಷನ್ಗಳಲ್ಲಿ ವಾಹನಗಳು ನಿಲ್ಲಬೇಕಾಗುತ್ತಿತ್ತು. ಈಗ ಬಹುತೇಕ ಸಿಗ್ನಲ್ಗಳನ್ನು ತಪ್ಪಿಸಿ ಸಾಗಲು ಸಾಧ್ಯವಾಗಿದೆ. ಆದರೆ, ಮೇಲ್ಸೇತುವೆ ಮೂಲಕ ಸಿಲ್ಕ್ಬೋರ್ಡ್ ಸಂಚಾರ ದಟ್ಟಣೆಯನ್ನು ತಪ್ಪಿಸಿ ಬಂದ ವಾಹನಗಳು ರಾಗಿಗುಡ್ಡ ಭಾಗದಲ್ಲಿ ಮತ್ತೆ ಸಿಗ್ನಲ್ ಎದುರಿಸುತ್ತಿರುವುದು ಸವಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮೇಲ್ಸೇತುವೆಯ ಇಳಿಜಾರು ನೇರವಾಗಿ ಸಿಗ್ನಲ್ ಬಳಿ ಸೇರುವುದರಿಂದ ಗರಿಷ್ಠ ಸಂಚಾರ ಸಮಯದಲ್ಲಿ ವಾಹನಗಳ ಸಾಲು ಮೇಲ್ಸೇತುವೆಯ ಮೇಲೆ ಕಂಡುಬರುತ್ತಿದೆ.