ನಗರದೆಲ್ಲೆಡೆ ಇ&ಖಾತಾ ಸಂಬಂಧಿತ ಸೇವಾ ತೊಂದರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಅರ್ಜಿಗಳು ಶೀಘ್ರದಲ್ಲಿ ಪರಿಹಾರವಾಗುವ ಬಗ್ಗೆ ಅಧಿಕಾರಿಗಳಲ್ಲೂ ಗೊಂದಲವಿದೆ. ಅನೇಕರ ಇ-ಖಾತಾ ಅರ್ಜಿಗಳು ಅನುಮೋದನೆಗಾಗಿ ಬಾಕಿ ಇರುವುದು, ಪರಿಶೀಲನೆಗೆ ಒಳಪಡದಿರುವುದು, ಕೆಲವರಿಗೆ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಿ ವಿಚಾರಿಸಬೇಕಾದ ಪರಿಸ್ಥಿತಿಯೂ ಎದುರಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಪಾಸ್ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲಿ ಇ&ಖಾತಾ ಸೇವಾ ಕೇಂದ್ರಗಳನ್ನು ತೆರೆಯುವ ಯೋಜನೆ ರೂಪಿಸಿದೆಯಾದರೂ ಸ್ಥಳದ ಅಭಾವ ಜಿಬಿಎಗೆ ಕಾಡುತ್ತಿದೆ.