ಮನೆಯ ಮಾಹಿತಿ, ಕಟ್ಟಡದ ಸಂಖ್ಯೆ, ನೆಲ, ಗೋಡೆ ಮತ್ತು ಮೇಲ್ಛಾವಣಿ ನಿಮಾರ್ಣಕ್ಕೆ ಬಳಸಿದ ವಸ್ತುಗಳು, ಮನೆಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕುಟುಂಬದ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಲಿಂಗ ಮತ್ತು ಜಾತಿ, ಕೊಠಡಿಗಳ ಸಂಖ್ಯೆ, ವಿವಾಹಿತರ ಸಂಖ್ಯೆ ಜತೆಗೆ ಕುಡಿಯುವ ನೀರಿನ ಮೂಲ, ಶೌಚಗೃಹ ಸೌಲಭ್ಯ, ಮಲಿನ ನೀರಿನ ಹರಿವು ವ್ಯವಸ್ಥೆ, ಸ್ನಾನಗೃಹ ಸೌಲಭ್ಯ, ಅಡುಗೆಗೆ ಬಳಸುವ ಮುಖ್ಯ ಇಂಧನದ ಬಗ್ಗೆ ಗಣತಿದಾರರು ಕೇಳಿದ್ದಾರೆ. ರೇಡಿಯೋ/ ಟ್ರಾನ್ಸಿಸ್ಟ್ಟರ್, ಟಿ.ವಿ., ಇಂಟರ್ನೆಟ್ ಸೌಲಭ್ಯ, ಕಂಪ್ಯೂಟರ್/ ಲ್ಯಾಪ್ಟಾಪ್, ಮೊಬೈಲ್ ಫೋನ್, ಟೆಲಿಫೋನ್, ದ್ವಿಚಕ್ರ/ ನಾಲ್ಕು ಚಕ್ರ ವಾಹನಗಳ ಬಗ್ಗೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೌದ್ಗಿಲ್ ತಿಳಿಸಿದ್ದಾರೆ.