ಬೇಕರಿ, ಕಾಂಡಿಮೆಂಟ್​ಗಳು ಬಂದ್!​

ಬೇಕರಿ, ಕಾಂಡಿಮೆಂಟ್​ಗಳು ಬಂದ್!​
ಬೇಕರಿ, ಕಾಂಡಿಮೆಂಟ್​ಗಳು ಬಂದ್!​
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ಕಿರುಕುಳ, ಪುಡಿ ರೌಡಿಗಳ ದಬ್ಬಾಳಿಕೆ ಹಿನ್ನೆಲೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿ ತಿಂಡಿ ತನಕ ನಗರದ ಬದುಕಿನ ಅವಿಭಾಜ್ಯ ಅಂಗವಾಗಿರುವ ಬೇಕರಿ ಹಾಗೂ ಕಾಂಡಿಮೆಂಟ್​ಗಳು ಗುರುವಾರದಿಂದ (ಜೂ.18) ಅರ್ನಿದಿಷ್ಟಾವಧಿ ಬಂದ್​ಗೆ ನಿರ್ಧರಿಸಿವೆ. 
ಹಫ್ತಾ ವಸೂಲಿ, ಅಧಿಕಾರಿಗಳ ಕಿರುಕುಳ ಹಾಗೂ ಪುಡಿ ರೌಡಿಗಳ ದಬ್ಬಾಳಿಕೆಗೆ ಬೇಸತ್ತಿರುವ ವ್ಯಾಪಾರಿಗಳ ಮುಷ್ಕರವು ನಗರದ ಜನಜೀವನದ ಮೇಲೂ ಇದರ ಪರಿಣಾಮ ಬೀಳುವ ಸಾಧ್ಯತೆ ಇದೆ. ಕಾರ್ಮಿಕ ಪರಿಷತ್​ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳ ಬೇಕರಿ, ಕಾಂಡಿಮೆಂಟ್​, ಟೀ ಸ್ಟಾಲ್​ಗಳು ಹಾಗೂ ಸಣ್ಣ ಉಪಾಹಾರ ಕೇಂದ್ರಗಳು ವ್ಯಾಪಾರ ಸ್ಥಗಿತಗೊಳಿಸಲಿವೆ. 
ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಹೆಚ್ಚಾಗಿವೆ. ಹಫ್ತಾ ವಸೂಲಿ ಕಾಟ, ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರಂತರ ತಪಾಸಣೆ ಹೆಸರಿನ ಕಿರುಕುಳ ಹಾಗೂ ತಂಬಾಕು ಉತ್ಪನ್ನಗಳ ಜಪ್ತಿ ಕ್ರಮಗಳಿಂದ ವ್ಯಾಪಾರ ನಡೆಸುವುದೇ ಕಷ್ಟಕರವಾಗಿದೆ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರವೇ ಪರವಾನಗಿ ನೀಡಿರುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಮಾರಾಟಕ್ಕೆ ಅವಕಾಶವಿದ್ದು, ಮತ್ತೊಂದೆಡೆ ಜಪ್ತಿ ನಡೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಸ್ಪಷ್ಟ ನೀತಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ. 
ಭದ್ರತಾ ವಾತಾವರಣ ಕಲ್ಪಿಸಿ
ಸಣ್ಣ ಬಂಡವಾಳ ಹೂಡಿ ಕುಟುಂಬ ನಿರ್ವಹಿಸುತ್ತಿರುವ ಸಾವಿರಾರು ಬೇಕರಿ ಮತ್ತು ಕಾಂಡಿಮೆಂಟ್​ ಮಾಲೀಕರಿಗೆ ಭದ್ರತಾ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಮುಷ್ಕರವನ್ನು ಅರ್ನಿದಿಷ್ಟಾವಧಿಗೆ ವಿಸ್ತರಿಸುವ ಎಚ್ಚರಿಕೆಯನ್ನು ಕಾರ್ಮಿಕ ಪರಿಷತ್​ ನೀಡಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net