ಚೆನ್ನೈ, ತಿರುಪತಿ, ಚಿತ್ತೂರಿಗೆ ತೆರಳುವವರಿಗೆ ಸಮಯ ಉಳಿತಾಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಯೋಜನೆ ಮತ್ತೊಂದು ಮಹತ್ವದ ಹಂತ ದಾಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಆಂಧ್ರ ಪ್ರದೇಶದಲ್ಲಿ ಬೇತಮಂಗಲ- ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ. ಹೊಸ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಇದರೊಂದಿಗೆ ಬೆಂಗಳೂರಿನಿಂದ ಸುಮಾರು 100 ಕಿ.ಮೀ.ವರೆಗೆ ಎಕ್ಸ್ಪ್ರೆಸ್ ವೇಯಲ್ಲಿ ನಿರಂತರ ಸಂಚಾರ ಸಾಧ್ಯವಾಗಿದೆ.
2025ರ ಆರಂಭದಲ್ಲಿ ಕರ್ನಾಟಕ ವ್ಯಾಪ್ತಿಯ ಹೊಸಕೋಟೆ& ಬೇತಮಂಗಲ ನಡುವಿನ 71 ಕಿ.ಮೀ. ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆಂಧ್ರ ಪ್ರದೇಶದಲ್ಲಿ 85 ಕಿ.ಮೀ. ಎಕ್ಸ್ಪ್ರೆಸ್ವೇ ನಿಮಾರ್ಣ ಮೂರು ಪ್ಯಾಕೇಜ್ಗಳಲ್ಲಿ ನಡೆಯುತ್ತಿದ್ದು, ಬೇತಮಂಗಲ- ಬೈರೆಡ್ಡಿಪಲ್ಲಿ (25 ಕಿ.ಮೀ.) ಹಾಗೂ ಬಂಗಾರಪಾಳೆಂ& ಗುಡಿಪಾಲ (29 ಕಿ.ಮೀ.) ಕಾಮಗಾರಿ ಪೂರ್ಣಗೊಂಡಿದೆ. ಬೈರೆಡ್ಡಿಪಲ್ಲಿ- ಬಂಗಾರಪಾಳೆಂ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅನುಮತಿ ವಿಳಂಬದಿಂದ 11 ಕಿ.ಮೀ. ಕಾಮಗಾರಿ ಮಾತ್ರ ಬಾಕಿಯಿದ್ದು, ವನ್ಯಜಿವಿಗಳ ಸಂಚಾರಕ್ಕಾಗಿ ಅಂಡರ್ಪಾಸ್ ನಿಮಾರ್ಣ ಕಾರ್ಯ ನಡೆಯುತ್ತಿದೆ. ಉಳಿದ ಕಾಮಗಾರಿ ಪೂರ್ಣಗೊಂಡ ಬಳಿಕ ತಮಿಳುನಾಡು ಭಾಗ ಸೇರಿ 262 ಕಿ.ಮೀ. ಉದ್ದದ ಎಕ್ಸ್ಪ್ರೆಸ್ವೇ 2026ರ ಡಿಸೆಂಬರ್ ವೇಳೆಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀೆ ಇದೆ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಮಾರ್ಗದಿಂದ ಬೆಂಗಳೂರಿನಿಂದ ಚಿತ್ತೂರು, ತಿರುಪತಿ ಹಾಗೂ ಚೆನ್ನೈಗೆ ತೆರಳುವ ವಾಹನಸವಾರರಿಗೆ ಹೆಚ್ಚು ಪ್ರಯೋಜನವಾಗಿದೆ. ಬೈರೆಡ್ಡಿಪಲ್ಲಿವರೆಗೆ ಎಕ್ಸ್ಪ್ರೆಸ್ವೇ ಬಳಸಿ ನಂತರ ಜಿಲ್ಲಾ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಿದರೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಬೈರೆಡ್ಡಿಪಲ್ಲಿ ಟೋಲ್ ಪ್ಲಾಜಾದಲ್ಲಿ ಪ್ರತಿದಿನ ಸರಾಸರಿ 2.2 ಲಕ್ಷ ರೂ. ಟೋಲ್ ಸಂಗ್ರಹವಾಗುತ್ತಿದೆ.
ರಾಜಧಾನಿಗೆ ಲಾಭವೇನು?
* ಚೆನ್ನೈ ಬಂದರು ಸಂಪರ್ಕ ಮತ್ತಷ್ಟು ವೇಗವಾಗುವುದರಿಂದ ಬೆಂಗಳೂರು ಕೈಗಾರಿಕೆಗಳ ರಫ್ತು& ಆಮದು ಚಟುವಟಿಕೆಗಳಿಗೆ ಉತ್ತೇಜನ.
* ಲಾಜಿಸ್ಟಿಕ್ಸ್ ಹಾಗೂ ಸರಕುಸಾಗಣಿ ವೆಚ್ಚ ಮತ್ತು ಸಮಯ ಉಳಿತಾಯ.
* ಹೊಸ ಕೈಗಾರಿಕೆ, ಗೋದಾಮು ಹಾಗೂ ಲಾಜಿಸ್ಟಿಕ್ಸ್ ಪಾರ್ಕ್ಗಳ ಹೂಡಿಕೆಗೆ ಬೆಂಗಳೂರು& ಹೊಸಕೋಟೆ ಕಾರಿಡಾರ್ ಆಕರ್ಷಕ.
* ಐಟಿ, ಉತ್ಪಾದನಾ ಹಾಗೂ ಇ-&ಕಾಮರ್ಸ್ ವಲಯಗಳ ವಿಸ್ತರಣೆಗೆ ಮತ್ತಷ್ಟು ಅವಕಾಶ.
ರ್ಯಾಂಪ್ ಬಳಕೆಗೆ ಟೋಲ್ ಇಲ್ಲ
ಎಕ್ಸ್ಪ್ರೆಸ್ವೇಯ ಮುಖ್ಯ ಮಾರ್ಗ ಬಳಸುವ ವಾಹನಗಳಿಗೆ ಮಾತ್ರ ಟೋಲ್ ವಿಧಿಸಲಾಗುತ್ತಿದ್ದು, ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ ಬಳಸುವ ವಾಹನಗಳಿಗೆ ಟೋಲ್ ಇರುವುದಿಲ್ಲ ಎಂದು ಎನ್ಎಚ್ಎಐ ಸ್ಪಷ್ಟಪಡಿಸಿದೆ. ಹೆಡಗನಬೆಲೆ, ಅಗ್ರಹಾರ, ಕೃಷ್ಣರಾಜಪುರ, ಸುಂದರಪಾಳ್ಯ, ಬೈರೆಡ್ಡಿಪಲ್ಲಿ