ಸಾಲು ಮರದ ತಿಮ್ಮಕ್ಕನ ಮನೆಗೆ ಭದ್ರತೆಗೆ ಮನವಿ

ಸಾಲು ಮರದ ತಿಮ್ಮಕ್ಕ
ಸಾಲು ಮರದ ತಿಮ್ಮಕ್ಕ
Published on
ಬೆಂಗಳೂರು: ದಿವಂಗತ ಸಾಲು ಮರದ ತಿಮ್ಮಕ್ಕ(Saulumarad Thimmakka) ವಾಸವಾಗಿದ್ದ ಮನೆಗೆ ಪೊಲೀಸ್ ಭದ್ರತೆ ಒದಗಿಸಬೇಕೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಗೆ ತಿಮ್ಮಕ್ಕ ಅವರ ಸಾಕು ಮಗ ಬಿ.ಎನ್. ಉಮೇಶ್ ಪತ್ರ ಬರೆದಿದ್ದಾರೆ.
ಸಾಲು ಮರದ ತಿಮ್ಮಕ್ಕ ಕೊನೆಗಾಲದಲ್ಲಿ ತುಮಕೂರು ರಸ್ತೆ ಬಾಗಲಗುಂಟೆಯ ಸೋಪ್‌ಯ್ಾಕ್ಟರಿ ಬಡಾವಣೆಯ ಮನೆಯಲ್ಲಿ ನೆಲೆಸಿದ್ದರು.
ಈ ಮನೆಯಲ್ಲಿ ತಿಮ್ಮಕ್ಕ ಅವರಿಗೆ ಸಂದ ಪದ್ಮಶ್ರೀ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಅವಾರ್ಡ್, ಇಂದಿರಾ ಪ್ರಿಯ ದರ್ಶಿನಿ, ವೃಕ್ಷಮಿತ್ರ, ನಾಡೋಜ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಹಲವಾರು ಬಂಗಾರ, ಬೆಳ್ಳಿಯ ಪದಕಗಳು ಇವೆ. ಆದರಿಂದ ಈ ಪ್ರಶಸ್ತಿಗಳ ಕಾವಲು ಸಲುವಾಗಿ ಮನೆಯ ಬಳಿ 24/7 ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net