ಮರುಅಭಿವೃದ್ಧಿಗೆ ಕನಿಷ್ಠ ಶೇ.75 ಮಾಲೀಕರ ಒಪ್ಪಿಗೆ ಕಡ್ಡಾಯವಾಗಿದ್ದು, ಒಪ್ಪದವರಿಗೆ ಮಾರುಕಟ್ಟೆ ಮೌಲ್ಯದ ಕನಿಷ್ಠ ಎರಡು ಪಟ್ಟು ಪರಿಹಾರ ನೀಡುವ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಬಿಲ್ಡರ್ಗಳು ಮೂಲ ದಾಖಲೆಗಳು, ನಕ್ಷೆಗಳು, ತೆರಿಗೆ ದಾಖಲೆಗಳು ಹಾಗೂ ಇತರ ದಾಖಲೆಗಳನ್ನು ಸಂಘಕ್ಕೆ ಕಡ್ಡಾಯವಾಗಿ ಹಸ್ತಾಂತರಿಸಬೇಕಿದೆ.