ನಿಗದಿತ ತಾಣದಲ್ಲಷ್ಟೇ ಆಹಾರ ನೀಡಬೇಕು: ಜಿಬಿಎ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕಲು 450ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರಿಗೆ ಆ ಜಾಗಗಳನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಕೆಲವು ಕಡೆ "ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ' ಎಂದು ಲಕಗಳನ್ನು ಅಳವಡಿಸಲಾಗಿದೆ. ರಾಜಾಜಿನಗರ, ಬಸನವಗುಡಿ ಸೇರಿ ನಗರದ ಕೆಲವೆಡೆ ಈಗಾಗಲೆ ಆಹಾರ ನೀಡುವ ಸ್ಥಳ ಸಿದ್ಧವಾಗಿದೆ. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಅತಿಹೆಚ್ಚು 150 ಕೇಂದ್ರಗಳನ್ನು ಗುರುತಿಸಲಾಗಿದೆ. ಕೇಂದ್ರ ಪಾಲಿಕೆಯಲ್ಲಿ 90, ಪಶ್ಚಿಮದಲ್ಲಿ 85, ಉತ್ತರದಲ್ಲಿ 70 ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 55 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಬಿಟ್ಟು ಇತರ ಪ್ರದೇಶಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.