ಹಳದಿ ಮಾರ್ಗಕ್ಕೆ 8ನೇ ರೈಲು ಶ್ರೀಘ್ರ |metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಸಾಧ್ಯತೆ
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 8ನೇ ರೈಲನ್ನು ಪಶ್ಚಿಮ ಬಂಗಾಳದ ತಿತಾಗಢ ರೈಲ್​ ಸಿಸ್ಟಂನಿಂದ ರವಾನಿಸಲಾಗಿದೆ. ಮುಂದಿನ 8-10 ದಿನಗಳಲ್ಲಿ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆ ಇದ್ದು, ಏಳು ಮತ್ತು ಎಂಟನೇ ರೈಲಿನ ಸೇರ್ಪಡೆಯೊಂದಿಗೆ ಈ ಮಾರ್ಗದ ರೈಲುಗಳ ಓಡಾಟ 13ರಿಂದ 8 ನಿಮಿಷಕ್ಕೆ ಇಳಿಯಲಿದೆ.
ಆರು ಬೋಗಿಗಳ ಈ ರೈಲಿನ ಕೋಚ್​ಗಳನ್ನು ಹೊತ್ತ ಲಾರಿಗಳು ಭಾನುವಾರ ಹೊರಟಿವೆ. ಅವುಗಳು ಬೆಂಗಳೂರು ಬಂದು ಸೇರಲು ಎಂಟು ಅಥವಾ ಹತ್ತು ದಿನಗಳು ಬೇಕಾಗಬಹುದು. ಜನವರಿ ಪೂರ್ತಿ 8ನೇ ರೈಲು ಕಾರ್ಯಕ್ಷಮತೆಯ ಹಲವು ಪರೀಕ್ಷೆಗಳಿಗೆ ಒಳಗಾಗಲಿದ್ದು, ಫೆಬ್ರವರಿಯಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ. 
ಸದ್ಯ ಆರು ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯಾಣಿಕರು ನಿಲ್ದಾಣದಲ್ಲಿ ರೈಲಿಗೆ ಕಾಯುವ ಸಮಯ 13 ನಿಮಿಷ ಇದೆ. ಎಲ್ಲ ರೈಲುಗಳ ಸೇವೆ ಆರಂಭವಾದರೆ ಕಾಯುವ ಸಮಯ 8 ನಿಮಿಷಕ್ಕೆ ಇಳಿಕೆ ಆಗಲಿದೆ.
7ನೇ ರೈಲು ವಾಣಿಜ್ಯ ಸಂಚಾರ ಶ್ರೀ: 
ನಮ್ಮ ಮೆಟ್ರೋ 7ನೇ ರೈಲು ಕಳೆದ ಡಿಸೆಂಬರ್​ನಲ್ಲಿ ತಲುಪಿತ್ತು. ತಿಂಗಳಾಂತ್ಯದಲ್ಲಿ ವಾಣಿಜ್ಯ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲಕ್ಷ ಮಂದಿ ಪ್ರಯಾಣ ನಿರೀಕ್ಷೆ
ನಮ್ಮ ಮೆಟ್ರೋ ಹಳದಿ ಹಾದಿಗೆ ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ನಿತ್ಯ ಸರಾಸರಿ 80 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ಮೆಟ್ರೋಗಳ ಸಂಖ್ಯೆ ಹೆಚ್ಚಾದಂತೆ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಲಕ್ಷ ದಾಟುವ ನಿರೀಕ್ಷೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net