ಜಿಬಿಎ ಅಧಿಕಾರಿಗಳ ಮೇಲೆ 5 ಕೋಟಿ ರೂ.ಲಂಚ ಆರೋಪ|gba

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎನ್​.ಆರ್​.ರಮೇಶ್​ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು 5 ಕೋಟಿ ರೂ. ಲಂಚ ಪಡೆದು 10 ಎಕರೆ ಜಾಗಕ್ಕೆ ನಕಲಿ ಪಿಐಡಿ ಸಂಖ್ಯೆ ನೀಡಿ ಎ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಎನ್​.ಆರ್​.ರಮೇಶ್​ ಆರೋಪ ಮಾಡಿದ್ದಾರೆ.
ಜಿಬಿಎ ಕೇಂದ್ರ ಕಚೇರಿ ಮುಂಭಾಗ ಗುರುವಾರ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡಿನ ಉತ್ತರಹಳ್ಳಿ ಹೋಬಳಿ ಮಲ್ಲಸಂದ್ರ ಗ್ರಾಮದ 18/14, 18/15, 18/16, 18/17, 18/18 ಮತ್ತು 18/19 ಕ್ಕೆ ಸೇರಿದ 10.20 ಎಕರೆ ವಿಸ್ತೀರ್ಣದ ಸ್ವತ್ತು ಚೆನ್ನೆೃ ಕಾಸಾಗ್ರಾಂಡ್​ ಲೋಟಸ್​ ಸಂಸ್ಥೆ ಮಾಲೀಕ ಸತೀಶ್​ ಎಂಬುವವರಿಗೆ ಸೇರಿದ್ದು, ರೆವೆನ್ಯೂ ಸ್ವತ್ತಾಗಿರುತ್ತದೆ. ಸದರಿ ಸ್ವತ್ತಿಗೆ ಭೂ ಪರಿವರ್ತನೆ ಆಗಿರುವುದಿಲ್ಲ. ಈ ರೆವೆನ್ಯೂ ಸ್ವತ್ತಿಗೆ ಎ ಖಾತೆ ಮಾಡಿಕೊಡಬೇಕೆಂಬ ದುರುದ್ದೇಶದಿಂದ, ಸ್ವತ್ತಿನ ಮಾಲೀಕರಿಂದ 5 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲಂಚ ಪಡೆದು ನಕಲಿ ಪಿಐಡಿ ನಂಬರ್​ ಪಡೆದು ಎ ಖಾತೆ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. 
ಈ ಅವ್ಯವಹಾರದಲ್ಲಿ ಕಂದಾಯ ಪರಿವೀಕ ಶಿವಕುಮಾರ್​, ಸಹಾಯಕ ಕಂದಾಯ ಅಧಿಕಾರಿ ರಮೇಶ್​ ರಾಥೋಡ್​, ಉಪ ಆಯುಕ್ತ ಅಬ್ದುಲ್​ ರಬ್​ ಮತ್ತು ಜಂಟಿ ಆಯುಕ್ತ ಆರತಿ ಆನಂದ್​ ಅವರ ಕೈವಾಡವಿದೆ ಎಂದು ತಿಳಿಸಿದ್ದಾರೆ. 
10.20 ಎಕರೆ ವಿಸ್ತೀರ್ಣದ ಸತ್ತಿನ ಪೈಕಿ 30 ಅಡಿ ವಿಸ್ತೀರ್ಣದ ಸ್ವತ್ತಿಗೆ ಪಿಐಡಿ ಸಂಖ್ಯೆ: 3458527845 ಎಂಬ ನಕಲಿ ಸಂಖ್ಯೆಯನ್ನು ನೀಡಿದ್ದು, ಈ ರೀತಿ 30 ಅಡಿಗಳ ಸ್ವತ್ತಿಗೆ ನಕಲಿ ಪಿಐಡಿ ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟಿರುತ್ತಾರೆ. ಪುನ@ ಈಗ ಅದೇ ಎ ಖಾತಾವನ್ನು 10.20 ಎಕರೆ ಚ.ಮೀ ಜಾಗಕ್ಕೆ ಸಂಖ್ಯೆ & 3458527845 ರ ಸ್ವತ್ತಿಗೆ ತಿದ್ದುಪಡಿ ಮಾಡುವ ಸಂಬಂಧ ಟಿಪ್ಪಣಿ ಹಾಳೆಗಳನ್ನು ಸಿದ್ಧಪಡಿಸಿರುತ್ತಾರೆ ಎಂದು ದಾಖಲೆ ಬಿಡುಗಡೆ ಮಾಡಿದರು.
ಈ ನಕಲಿ ಕೃತ್ಯದಿಂದ ಪಶ್ಚಿಮ ಪಾಲಿಕೆಗೆ ಹತ್ತಾರು ಕೋಟಿ ಹಣ ನಷ್ಟ ಉಂಟಾಗಿದೆ. ನೂರಾರು ನಕಲಿ ಖಾತಾಗಳನ್ನು ಸೃಷ್ಟಿಸಿ, ಪ್ರತಿಯೊಬ್ಬರಿಂದ ಲಾಂತರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆದು ಪಾಲಿಕೆಗೆ ಮಹಾವಂಚನೆಯನ್ನು ಮಾಡಿರುತ್ತಾರೆಂದು ಆರೋಪಿಸಿದರು. 
ಕಠಿಣ ಕ್ರಮ ಕೈಗೊಳ್ಳಿ
ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಅಂತ ಅವರು ಆಗ್ರಹಿಸಿದ್ದು, ಸಂಪೂರ್ಣ ದಾಖಲೆಗಳ ಸಹಿತ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರು, ಜಿಬಿಎ ಕಂದಾಯ ಇಲಾಖೆಯ ವಿಶೇಷ ಆಯುಕ್ತರಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಎನ್​.ಆರ್​.ರಮೇಶ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net