ಬೀದಿನಾಯಿ ನಿರ್ವಹಣಾ ವೆಚ್ಚ ತಲಾ ಮಾಸಿಕ 3,035 ರೂ.! | MAINTANANCE CHARGE

ಬೀದಿನಾಯಿಗಳ ಸಾಂದರ್ಭಿಕ ಚಿತ್ರ
ಬೀದಿನಾಯಿಗಳ ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎನಲ್ಲಿವೆ 2.5 ಲಕ್ಷಕ್ಕೂ ಅಧಿಕ ಶ್ವಾನ
  • ತಾತ್ಕಾಲಿಕ ತಾಣಕ್ಕೆ ರವಾನಿಸಲು ಪ್ರಾಣಿಪ್ರಿಯರ ವಿರೋಧ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಒಂದು ಶ್ವಾನವನ್ನು ಸ್ಥಳಾಂತರಿಸಿ ಆಶ್ರಯತಾಣದಲ್ಲಿ ಸಂರಕ್ಷಣೆ ಮಾಡಲು ಮಾಸಿಕ 3,035 ರೂ. ಖರ್ಚು ತಗುಲಬಹುದು ಎಂದು ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಂದಾಜಿಸಿದೆ. ರಾಜಧಾನಿಯಲ್ಲಿ ಸುಮಾರು 2.5 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಈ ಪೈಕಿ 2 ಲಕ್ಷ ಶ್ವಾನಗಳನ್ನು ಸಂರಸಲು ತಿಂಗಳಿಗೆ 60.70 ಕೋಟಿ ರೂ.ಗಳಿಗೂ ಅಧಿಕ ಮೊತ್ತ ನಿರ್ವಹಣೆಗೆ ವ್ಯಯಿಸಬೇಕಾಗುತ್ತದೆ ಎಂಬ ಲೆಕ್ಕಾಚಾರ ಮಾಡಲಾಗಿದೆ.
ಸದ್ಯ ಐದು ಪಾಲಿಕೆಗಳಲ್ಲಿ 2,206 ಬೀದಿನಾಯಿಗಳನ್ನು ಗುರುತಿಸಲಾಗಿದೆ. ಅವುಗಳ ನಿರ್ವಹಣಾ ವೆಚ್ಚ ಹೆಚ್ಚಾದಲ್ಲಿ ಅದನ್ನು ಭರಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೆ ತಾತ್ಕಾಲಿಕವಾಗಿ ಬೀದಿನಾಯಿಗಳನ್ನು ಸ್ಥಳಾಂತರಿಸಲು ವಿವಿಧ ಪಾಲಿಕೆಗಳು ಆಯ್ಕೆ ಮಾಡಿಕೊಂಡಿರುವ ಎನ್​ಜಿಒ ಕೆಲವು ವಸತಿ ಪ್ರದೇಶದಲ್ಲಿವೆ. ಅಲ್ಲಿರುವ ನಾಯಿಗಳಿಂದಲೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಭವಿಷ್ಯದಲ್ಲಿ ಹೆಚ್ಚಿನ ಶ್ವಾನಗಳನ್ನು ರವಾನಿಸಿದರೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಬೀದಿನಾಯಿಗಳಿಗೆ ಆಹಾರ:
ಬಿಬಿಎಂಪಿ ಅವಧಿಯಲ್ಲಿ ಬೀದಿನಾಯಿಗಳಿಗೆ ಒಂದು ಹೊತ್ತಿನ ಆಹಾರ ನೀಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಈಗ ಸುಪ್ರೀಂಕೋರ್ಟ್​ ಆದೇಶದ ಬಳಿಕ ಶ್ವಾನಗಳ ಸಂರಕ್ಷಣೆಗೆ ಮುಂದಾಗಿರುವ ಜಿಬಿಎ, ಆಶ್ರಯತಾಣಗಳಿಗೆ ಸ್ಥಳಾಂತರಗೊಳ್ಳುವ ಬೀದಿನಾಯಿಗಳಿಗೆ ದಿನಕ್ಕೆ 2 ಬಾರಿ ಚಿಕನ್​ ರೈಸ್​ ನೀಡಲು ಸಿದ್ಧತೆ ನಡೆಸುತ್ತಿದೆ. ಇದರ ನಿರ್ವಹಣಾ ವೆಚ್ಚವೂ ಹೆಚ್ಚಳವಾಗಲಿದ್ದು, ಆಹಾರ ಹಾಗೂ ಇತರ ಖರ್ಚುನ್ನು ಹೇಗೆ ಬಗೆಹರಿಸಬೇಕು ಎಂಬ ಚರ್ಚೆ ಅಧಿಕಾರಿ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದೆ.
ಶ್ವಾನ ಗುರುತಿಸುವಿಕೆ ಪ್ರಗತಿಯಲ್ಲಿ:
ಪ್ರಸ್ತುತ ಜಿಬಿಎ ಪ್ರದೇಶದಲ್ಲಿನ ಶಾಲೆ/ ಕಾಲೇಜು, ಬಸ್​/ ರೈಲು ನಿಲ್ದಾಣ, ಆಸ್ಪತ್ರೆ, ಮೈದಾನ ಇತ್ಯಾದಿ ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕಿದೆ. ಇದರನ್ವಯ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 1,623, ದಣ&131, ಕೇಂದ್ರ& 222, ಹಾಗೂ ಪಶ್ಚಿಮ& 37 ಸೇರಿ ಒಟ್ಟು 2,206 ಶ್ವಾನಗಳನ್ನು ಗುರುತಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ ಸ್ಪಷ್ಟ ಕಾರ್ಯಸೂಚಿ ಸಿದ್ಧಪಡಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್​ ಆದೇಶದ ಪ್ರಕಾರ ಶಾಶ್ವತ ಆಶ್ರಯತಾಣಗಳಿದ್ದಾಗ ಮಾತ್ರ ನಾಯಿಗಳನ್ನು ಬಂಧಿಸಬಹುದು. ಆದರೆ, ಜಿಬಿಎ ಬಳಸುತ್ತಿರುವ ಕೇಂದ್ರಗಳು ತಾತ್ಕಾಲಿಕ ಮಾತ್ರ. ಇದು ಕಾನೂನಿನ ನೇರ ಉಲ್ಲಂಘನೆಯಾಗಿದೆ. ಕೋರ್ಟ್​ ಆದೇಶವಿದ್ದರೂ, ಪಾಲಿಕೆಗಳು ಅಡ್ಡದಾರಿಯಲ್ಲಿ ಸಾಗುತ್ತಿರುವುದು ಸರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net