ಎರಡು ರೈಲುಗಳು ಮುಖ್ಯ ಮಾರ್ಗದಲ್ಲಿ ಕಡ್ಡಾಯವಾಗಿ 750 ಕಿ.ಮೀ. ಟ್ರಯಲ್ ರನ್ ಪೂರ್ಣಗೊಳಿಸಿದ ಬಳಿಕ ಮೇನಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ಎರಡು ವಾರ ಹಿಡಿಯುತ್ತದೆ. 19.15 ಕಿ.ಮೀ. ಉದ್ದದ ಆರ್. ವಿ. ರಸ್ತೆ& ಬೊಮ್ಮಸಂದ್ರ ಮಾರ್ಗದಲ್ಲಿ ವಾರದ ದಿನಗಳಲ್ಲಿ ಸರಾಸರಿ ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಆದರೆ, ಜನದಟ್ಟಣೆ ಹೆಚ್ಚಾಗಿರುವಾಗ 9 ನಿಮಿಷಕ್ಕೊಂದು ಹಾಗೂ ಜನದಟ್ಟಣೆ ಇಲ್ಲದಿರುವ ಅವಧಿಯಲ್ಲಿ 14 ನಿಮಿಷಗಳ ಅಂತರದಲ್ಲಿ ಸೇವೆ ಲಭಿಸುತ್ತಿದೆ.