ಕಬ್ಬಿನ ಗದ್ದೆಯಲ್ಲಿ ಕೊಳೆತ ಶವ ಪತ್ತೆಯಾದ ಬೆನ್ನಲ್ಲೇ ಅತ್ತಿಗೆ-ಮೈದುನನ ಮೈಯಲ್ಲಿ ಶುರುವಾಯ್ತು ನಡುಕ!

BGK
Published on

ಬಾಗಲಕೋಟೆ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಯಾಗಿದ್ದಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಯಮನಪ್ಪ ಕರೆಣ್ಣವರ(32) ಕೊಲೆಯಾದ ವ್ಯಕ್ತಿ. ಪತ್ನಿ ರುಕ್ಮವ್ವ ಹಾಗೂ ಪ್ರಿಯಕರ‌ ಮೈದುನ ಮುದಕಪ್ಪ ಕರೆಣ್ಣವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೈದುನನ ಜತೆ ಅನೈತಿಕ ಸಂಬಂಧಕ್ಕೆ ಪತಿ ಅಡಚಣೆಯಾಗಿದ್ದಕ್ಕೆ ಇಬ್ಬರು ಸೇರಿ ಯಮನಪ್ಪನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.

ಎಂಟು ದಿನಗಳ ಹಿಂದೆ ಯಮನಪ್ಪ ನಾಪತ್ತೆಯಾಗಿದ್ದ. ಇಂದು ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದ ಕಬ್ಬಿನ ಹೊಲದಲ್ಲಿ ಕಬ್ಬು ಕಟಾವು ಮಾಡುವಾಗ ಯಮನಪ್ಪನ ಶವ ಕಾರ್ಮಿಕರ ಕಣ್ಣಿಗೆ ಬಿದ್ದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರ ಮೈದುನ ಯಮನಪ್ಪನ ಕತ್ತು ಹಿಸುಕಿ‌ ಕೊಲೆಗೈದು ಕಬ್ಬಿನ‌ ಹೊಲದಲ್ಲಿ ಎಸೆದಿರುವ ಆರೋಪ ಮಾಡಲಾಗಿದೆ.

ರುಕ್ಮವ್ ಹಾಗೂ ಮುದಕಪ್ಪ ಸಂಬಂಧದಲ್ಲಿ ಅತ್ತಿಗೆ-ಮೈದುನ. ಮುದಕಪ್ಪ ಮೃತ ಯಮನಪ್ಪ ಅವರ ದೊಡ್ಡಪ್ಪನ‌ ಮಗ. ಯಮನಪ್ಪನ ಶವ ಹಲಗಲಿ ಗ್ರಾಮದ ಎಚ್ ಆರ್ ಮಾಚಪ್ಪನವರ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net