ವಿಮಾನನಿಲ್ದಾಣ ಮೆಟ್ರೋ ಮಾರ್ಗದ ವಿದ್ಯುತ್​ ತಂತಿ ಸ್ಥಳಾಂತರ

NAMMA METRO 25 JAN 20
Published on

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದಲ್ಲಿನ ವಿಮಾನನಿಲ್ದಾಣ ಸಂಪರ್ಕ ಮಾರ್ಗದ ನಿರ್ಮಾಣಕ್ಕೆ ಪೂರಕ ಕಾಮಗಾರಿಗಳನ್ನು ಆರಂಭಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ. ಅದರಂತೆ ಕೆ.ಆರ್​.ಪುರದಿಂದ ಕಲ್ಯಾಣನಗರವರೆಗಿನ ಮಾರ್ಗದಲ್ಲಿರುವ ಬೆಸ್ಕಾಂ ವಿದ್ಯುತ್​ ತಂತಿಗಳ ಸ್ಥಳಾಂತರಕ್ಕೆ ಶ್ರೀ ಚಾಲನೆ ನೀಡಲಾಗುತ್ತದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ಕ್ಕೆ ತೆರಳುವವರ ಅನುಕೂಲಕ್ಕಾಗಿ ಬಿಎಂಆರ್​ಸಿಎಲ್​ ಕೆ.ಆರ್​.ಪುರದಿಂದ ಕೆಐಎವರೆಗೆ ಮೆಟ್ರೋ ರೈಲು ಮಾರ್ಗ ನಿಮಿರ್ಸುತ್ತಿದೆ. ಅದರಲ್ಲಿ ವಿಮಾನನಿಲ್ದಾಣ ಆವರಣದಿಂದ ನಿಲ್ದಾಣದವರೆಗಿನ 5 ಕಿ.ಮೀ. ಮಾರ್ಗ ಮತ್ತು ಕೆಐಎನಲ್ಲಿ 2 ಮೆಟ್ರೋ ನಿಲ್ದಾಣಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತ ನಿರ್ಮಿಸಿಕೊಡಲಿದೆ.

ಉಳಿದಂತೆ ಕೆ.ಆರ್​.ಪುರದಿಂದ 32 ಕಿ.ಮೀ. ಉದ್ದದ ಮಾರ್ಗವನ್ನು ಬಿಎಂಆರ್​ಸಿಎಲ್​ ನಿಮಿರ್ಸಲಿದೆ. ಅದಕ್ಕಾಗಿ ಈಗಾಗಲೆ ಯೋಜನೆ ಸಿದ್ಧಪಡಿಸಲಾಗಿದ್ದು, ಅದಕ್ಕೂ ಮುನ್ನ ಯುಟಿಲಿಟಿ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ. ಅದರ ಭಾಗವಾಗಿ ಕೆ.ಆರ್​.ಪುರದಿಂದ ಕಲ್ಯಾಣನಗರವರೆಗಿನ ಬೆಸ್ಕಾಂ ವಿದ್ಯುತ್​ ತಂತಿಗಳ ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆ ನೇಮಿಸಲಾಗುತ್ತಿದೆ. ಅದಕ್ಕಾಗಿ ಟೆಂಡರ್​ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

9.7 ಕಿ.ಮೀ. ಉದ್ದದ ಮಾರ್ಗ: ಕೆ.ಆರ್​.ಪುರದಿಂದ ಕೆಐಎವರೆಗೆ 37 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿಮಿರ್ಸಲಾಗುತ್ತದೆ. ಅದರಲ್ಲಿ ಕೆ.ಆರ್​.ಪುರ&ಕಲ್ಯಾಣನಗರವರೆಗಿನ 9.7 ಕಿ.ಮೀ. ಉದ್ದದ ಮಾರ್ಗದ ವಿದ್ಯುತ್​ ತಂತಿಗಳನ್ನು ತೆರವು ಮಾಡಲಾಗುತ್ತಿದೆ. ಅದಕ್ಕಾಗಿ ಬಿಎಂಆರ್​ಸಿಎಲ್​ 5.98 ಕೋಟಿ ರೂ. ವ್ಯಯಿಸುತ್ತಿದ್ದು, ಶ್ರೀದಲ್ಲಿ ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ.

5 ನಿಲ್ದಾಣಗಳು: ಸದ್ಯ ವಿದ್ಯುತ್​ ತಂತಿ ಸ್ಥಳಾಂತರಿಸಲಾಗುತ್ತಿರುವ ಮಾರ್ಗದಲ್ಲಿ 5 ನಿಲ್ದಾಣಗಳು ನಿರ್ಮಾಣಗೊಳ್ಳಬೇಕಿದೆ. ಅದರಂತೆ ಕೆ.ಆರ್​.ಪುರದಲ್ಲಿ ಇಂಟರ್​ಚೇಂಜ್​ ನಿಲ್ದಾಣ, ಕಸ್ತೂರಿನಗರ, ಹೊರಮಾವು, ಎಚ್​ಆರ್​ಬಿಆರ್​ ಲೇಔಟ್​ ಮತ್ತು ಕಲ್ಯಾಣನಗರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ನಿಲ್ದಾಣ ಮತ್ತು ಮಾರ್ಗದ ನಿರ್ಮಾಣ ಕಾಮಗಾರಿಗೆ ಅಡ್ಡಿಯನ್ನುಂಟು ಮಾಡುವ ವಿದ್ಯುತ್​ತಂತಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬೇರೆಡೆ ಸ್ಥಳಾಂತರಿಸುವ ಕೆಲಸ ಗುತ್ತಿಗೆ ಸಂಸ್ಥೆ ಮಾಡಬೇಕಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net