More

    ಈ ಬಜಾರ್​ಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 35 ರೂಪಾಯಿ!

    ಹೈದರಾಬಾದ್​: ಹಲವೆಡೆ ಈರುಳ್ಳಿ ದರ ಕಿಲೋ ಒಂದರ 100 ರೂಪಾಯಿ ಗಡಿ ದಾಟಿರುವಾಗ ಈ ಬಜಾರ್​ಗಳಲ್ಲಿ ಮಾತ್ರ 35 ರೂಪಾಯಿಗೆ ಒಂದು ಕಿಲೋ ಈರುಳ್ಳಿ ಮಾರಾಟ ಮಾಡ್ತಾರಂತೆ!. ತೆಲಂಗಾಣ ರಾಜ್ಯ ಸರ್ಕಾರದ ತೀರ್ಮಾನ ಇದು.

    ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಮುಖಿಯಾಗಿರುವಾಗ ಅದನ್ನು ತಡೆಯಲು ಸರ್ಕಾರ, ತನ್ನದೇ ಆದ ರೈತು ಬಜಾರ್​ಗಳಲ್ಲಿ 35 ರೂಪಾಯಿ ದರದಲ್ಲಿ ಕಿಲೋ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಹೈದರಾಬಾದ್​ ನಗರದಲ್ಲಿ ಹನ್ನೊಂದು ಕಡೆ ರೈತು ಬಜಾರ್​ ಕಾರ್ಯಾಚರಿಸುತ್ತಿದೆ. ಈ ಬಜಾರ್​ನಲ್ಲಿ ಸಣ್ಣ ರೈತರು ನೇರವಾಗಿ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

    ಇದನ್ನೂ ಓದಿ: ಬಿಡುಗಡೆಯಾದ ಒಂದೇ ದಿನದಲ್ಲಿ ಪೈರಸಿಯಾದ ‘ಮಿರ್ಜಾಪುರ್​ – 2’

    ಸದ್ಯ ಪ್ರತಿ ಗ್ರಾಹಕನಿಗೆ ಎರಡು ಕಿಲೋ ಈರುಳ್ಳಿ ಮಾರಾಟಕ್ಕೆ ಅನುಮತಿ ಇದೆ. ಇದಕ್ಕಾಗಿ ಗ್ರಾಹಕ ತನ್ನ ಗುರುತಿನ ಚೀಟಿ ತೋರಿಸಬೇಕಾಗುತ್ತದೆ. ಲಾಭೋದ್ದೇಶದ ಚಟುವಟಿಕೆ ಈರುಳ್ಳಿ ಮಾರುಕಟ್ಟೆಯಲ್ಲಿ ಕಂಡುಬಂದರೆ ಅಂಥ ವಹಿವಾಟಿನಲ್ಲಿ ನಿರತರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಎಸ್​. ನಿರಂಜನ ರೆಡ್ಡಿ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

    ಹಾಥರಸ್ ಕೇಸ್​: ನಿಗೂಢವಾಗಿ ಸಾವನ್ನಪ್ಪಿದ್ರು ಎಸ್​ಐಟಿಯಲ್ಲಿರುವ ಪೊಲೀಸ್ ಅಧಿಕಾರಿಯ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts