More

    ಧರ್ಮಕ್ಕೆ ಸೀಮಿತವಾಗಬಾರದು ಮಹಾಪುರುಷರು: ಮಹಮ್ಮದ್ ಕುಂಞ

    ಪಡುಬಿದ್ರಿ: ಜಗತ್ತಿನ ಯಾವೊಬ್ಬ ದಾರ್ಶನಿಕ, ಮಹಾಪುರುಷರು ದೇವರನ್ನು ರಕ್ಷಿಸಬೇಕಾದ ಕೆಲಸವನ್ನು ಪ್ರತಿಪಾದಿಸದೆ ಮನುಷ್ಯತ್ವದ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ ಎಂದು ಮಂಗಳೂರು ಶಾಂತಿಪ್ರಕಾಶನ ವ್ಯವಸ್ಥಾಪಕ ಮಹಮ್ಮದ್ ಕುಂಞ ಹೇಳಿದರು.

    ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಕಾಪುವಿನಲ್ಲಿ ಶನಿವಾರ ಆಯೋಜಿಸಿದ್ದ ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮ್ಮದ್ ಜೀವನ ಮತ್ತು ಸಂದೇಶ ಸಭೆಯಲ್ಲಿ ಮಾತನಾಡಿದರು.

    ದಾರ್ಶನಿಕರು, ಮಹಾಪುರುಷರು, ಧಾರ್ಮಿಕ ಆಚಾರ್ಯರನ್ನು ಧರ್ಮ, ಜಾತಿ ಮತ್ತು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರಗಳು ನಡೆಯುತ್ತಿವೆ. ಜಗತ್ತಿನ ಅಗ್ರ ರಾಷ್ಟ್ರದಲ್ಲಿಯೂ ಕೇವಲ ಅಧಿಕಾರದ ಆಸೆಗಾಗಿ ಮನುಷ್ಯತ್ವವನ್ನು ಮರೆಯುವ ಪ್ರಯತ್ನಗಳಾಗುತ್ತಿವೆ. ಕರೊನಾ ಇಡೀ ಜಗತ್ತಿಗೆ ಸಹೋದರತೆ ಹಾಗೂ ಮನುಷ್ಯತ್ವದ ಬೆಲೆ ಏನೆಂಬುದನ್ನು ತೋರಿಸಿಕೊಟ್ಟಿದೆ ಎಂದರು.

    ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಮಾತನಾಡಿದರು.
    ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಇದ್ರೀಸ್ ವಿಷಯ ಮಂಡಿಸಿದರು. ಉಳಿಯಾರಗೋಳಿ ದಂಡತೀರ್ಥ ಪದವಿ ಪೂರ್ವ ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ನೀಲಾನಂದ ನಾಯ್ಕ ಮಾತನಾಡಿದರು. ನಿವೃತ್ತ ಶಿಕ್ಷಕ ನಿರ್ಮಲಕುಮಾರ್ ಹೆಗ್ಡೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಅನಿಸಿಕೆ ವ್ಯಕ್ತಪಡಿಸಿದರು.

    ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೌಲಾ ಉಪಸ್ಥಿತರಿದ್ದರು. ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಅಧ್ಯಕ್ಷ ಶಭೀ ಅಹಮದ್ ಕಾಝಿ ಸ್ವಾಗತಿಸಿದರು. ಕೊಂಬಗುಡ್ಡೆ ಜಾಮಿಯಾ ಮಸೀದಿ ಧರ್ಮಗುರು ಮಹಮ್ಮದ್ ಪರ್ವೇಜ್ ಆಲಂ ಕುರಾನ್ ಪಠಿಸಿದರು. ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಆಲಿ ಕಾಪು ನಿರೂಪಿಸಿದರು. ಕಾಪು ತಾಲೂಕು ಸಮಿತಿ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ವಂದಿಸಿದರು.

    ಪ್ರವಾದಿ ಸಾರಿದ ಮಾನವ ಧರ್ಮ ಶ್ರೇಷ್ಠ ಧರ್ಮ. ಧರ್ಮ ಹುಟ್ಟಿಸಿದ ನಾವೇ ಸ್ವಾರ್ಥ ಹಾಗೂ ಅಸ್ಮಿತೆಗೋಸ್ಕರ ಅದನ್ನಿಂದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಸ್ತ್ರೀಯರ ಮೇಲಿನ ಶೋಷಣೆ ನಿಂತಾಗ ಅ ಧರ್ಮ ಶ್ರೇಷ್ಠವಾಗುತ್ತದೆ. ಧರ್ಮ ಶುದ್ಧಿಯಾಗಲು ಸಮಾನ ಶಿಕ್ಷಣಕ್ಕೆ ಒತ್ತು ನೀಡಬೇಕು.
    | ಡಾ. ವಿನ್ಸೆಂಟ್ ಆಳ್ವ
    ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts