More

    ಸಂತರಿಗೆ ಜನ್ಮ ನೀಡಿದವಳೇ ಮಹಾತಾಯಿ

    ಶಿಕಾರಿಪುರ: ಧರ್ಮ ಕಾರ್ಯಗಳಿಗೆ ಪುತ್ರ ಕಣ್ವಕುಪ್ಪೆ ಮಠದ ಶ್ರೀಗಳನ್ನು ಪೀಠಾಧಿಕಾರಿಯಾಗಿ ಮಾಡಲು ಸಮಾಜಕ್ಕೆ ಕೊಡುಗೆ ನೀಡಿದ ಮಹಾತಾಯಿ ಲಿಂ. ಶಾರದಮ್ಮ ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮಿಜಿ ಹೇಳಿದರು.

    ಚಿಕ್ಕಮಾಗಡಿ ಗ್ರಾಮದಲ್ಲಿ ಜಗಳೂರು ತಾಲೂಕು ಕಣ್ವಕುಪ್ಪೆ ಮಠದ ಶ್ರೀಗಳ ಪೂರ್ವಾಶ್ರಮದ ತಾಯಿ ಶಾರದಮ್ಮ ಅವರ ಶಿವಗಣಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಎಲ್ಲ ತಾಯಿಯರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಲಕ್ಷಕ್ಕೊಬ್ಬ ತಾಯಿಗೆ ಪುಣ್ಯ ಸಿಗುತ್ತದೆ ಎಂದು ತಿಳಿಸಿದರು.
    ಮಹಾತ್ಮರು, ಪುಣ್ಯ ಪುರುಷರು, ಸಾಧಕರು, ಸಂತರು, ಮಹಾಂತರು ಹಾಗೂ ಋಷಿಮುನಿ ಶರಣರಿಗೆ ಜನ್ಮ ನೀಡಿದವರು ಸರ್ವಮಾನ್ಯರು. ಶಾರದಮ್ಮ ಅವರು ಧರ್ಮ ರಕ್ಷಣೆಗಾಗಿ ಪುತ್ರನನ್ನು ನೀಡಿದ ಕಾರ್ಯ ಅನನ್ಯ ಎಂದರು.
    ಕಣ್ವಕುಪ್ಪೆ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಿಗೆ ಜಗತ್ತಿನಲ್ಲಿ ಪರ್ಯಾಯ ಯಾವುದೂ ಇಲ್ಲ. ನವಮಾಸ ಮಗುವನ್ನು ತನ್ನ ಗರ್ಭದಲ್ಲಿರಿಸಿ ತನ್ನ ಜೀವ ತೇಯ್ದು ಜನ್ಮ ನೀಡುವ ದೇವತೆ. ಅವಳ ವಾತ್ಸಲ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
    ಬಾಲ್ಯದಿಂದಲೂ ನಮಗೆ ಅತ್ಯುತ್ತಮ ಸಂಸ್ಕಾರ ನೀಡಿ ಬೆಳೆಸಿದರು. ಆಚಾರ, ವಿಚಾರ ಹಾಗೂ ಸಂಪ್ರದಾಯಗಳನ್ನು ಕಲಿಸಿದರು. ಎಲ್ಲಕ್ಕಿಂತ ಧರ್ಮ ಶ್ರೇಷ್ಠ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನುವ ಸಂಸ್ಕಾರ ಬೆಳೆಸಿದರು. ಸತ್ಯ, ಪ್ರಾಮಾಣಿಕತೆ, ಸದ್ವಿಚಾರಗಳ ಬೀಜ ಬಿತ್ತಿದವರು ನನ್ನ ತಾಯಿ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts