

ಹುಬ್ಬಳ್ಳಿ: ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದ್ದು, ಕಂತೆ-ಕಂತೆ ಹಣ ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಒಟ್ಟು 7 ಅಧಿಕಾರಿಗಳಿಗೆ ಸಂಬಂಧಿಸಿದ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಲಂಚಕೋರರಿಗೆ ಶಾಕ್ ನೀಡಿದೆ. ಅದರಂತೆ ಎಇಇ ದೇವರಾಜ ಕೆ. ಶಿಗ್ಗಾಂವಿ ಮನೆ ಮತ್ತು ತಾಯಿ ಹಾಗೂ ಮಾವನ ಮನೆಗಳ ಮೇಲೂ ಎಸಿಬಿ ದಾಳಿ ಮಾಡಿದೆ. ಶಿಗ್ಗಾಂವಿ ಮನೆಯಲ್ಲಿ ಅಪಾರ ಪ್ರಮಾಣ ನಗದು, ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆಯಾಗಿವೆ. ಕಂತೆ ಕಂತೆ ನೋಟುಗಳನ್ನು ಕಂಡ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಶಿಗ್ಗಾಂವಿಗೆ ಸಂಬಂಧಿಸಿದ ಆಸ್ತಿ ದಾಖಲೆ, ಹಣಕಾಸು ವ್ಯವಹಾರದ ಬಗ್ಗೆ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದ ತಂಡ ಪರಿಶೀಲನೆ ಮಾಡುತ್ತಿದೆ.