

ಮಂಗಳೂರು: ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 30 ಕಡೆ ಏಕಕಾಲದಲ್ಲಿ ದಾಳಿ ಮಾಡಿರುವ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಲಂಚಕೋರರಿಗೆ ಶಾಕ್ ನೀಡಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರುವ ಮಾಹಿತಿ ಮೇರೆಗೆ ಒಟ್ಟು 7 ಜನರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ದಾಳಿ ಮಾಡಿದೆ. ಈ ಪೈಕಿ ಮಂಗಳೂರು ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ಜಯರಾಜ್ ಮನೆಯಲ್ಲಿ ಕಂತೆ ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ. ಅಷ್ಟೇ ಅಲ್ಲ, ಪತ್ನಿ ಅಕೌಂಟ್ನಲ್ಲಿ ಒಂದು ಕೋಟಿ ಹಣ ಇದೆ.
ಮಂಗಳೂರಿನ ಕಾಪಿಕಾಡ್ನ ಅಪಾರ್ಟ್ಮೆಂಟ್ನಲ್ಲಿ ಜಯರಾಜ್ ವಾಸವಿದ್ದು, ಮಂಗಳೂರು ಹೊರವಲಯದ ಪಡೀಲ್ನಲ್ಲಿ ಇವರ ಮತ್ತೊಂದು ಮನೆ ಇದೆ. ಈ ಎರಡೂ ಮನೆಗಳಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ. ಜಯರಾಜ್ ಪತ್ನಿ ಡಾ.ಜಯಶ್ರೀ ಕೇರಳದಲ್ಲಿ ಸರ್ಕಾರಿ ವೈದ್ಯೆ. 12 ವರ್ಷದಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳ ಬ್ಯಾಂಕ್ನಲ್ಲಿ ಜಯರಾಜ್ಗೆ ಸೇರಿದ್ದ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆಯಾಗಿದೆ. ದಾಖಲೆ ಸಹಿತ ಎಸಿಬಿ ಅಧಿಕಾರಿಗಳು ಕೇರಳದ ಬ್ಯಾಂಕ್ನಲ್ಲಿನ ಜಯರಾಜ್ ಕುಟುಂಬದ ಲಾಕರ್ ಓಪನ್ ಮಾಡಲು ತೆರಳಿದ್ದಾರೆ. ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಇನ್ನು ಕೇರಳದಲ್ಲಿರುವ ಜಯರಾಜ್ ಪತ್ನಿಯ ಮನೆ ಮೇಲೂ ಎಸಿಬಿ ದಾಳಿ ಮಾಡಿದ್ದು. ಸಾಕಷ್ಟು ಚಿನ್ನಾಭರಣ ಪತ್ತೆಯಾಗಿದೆ. ಕೇರಳ ಸೇರಿ ಮಂಗಳೂರಿನಲ್ಲಿ ಅಪಾರ ಆಸ್ತಿ ಗಳಿಕೆ ಆರೋಪ ಪತ್ನಿ ಮೇಲೂ ಇದೆ. ಮಂಗಳೂರಿನಲ್ಲಿ ಜಯರಾಜ್ ನಿವಾಸದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪತ್ರ ಸಿಕ್ಕಿದೆ. 500 ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ಕಂತೆ-ಕಂತೆ ನೋಟುಗಳು ಈ ಮನೆಯಲ್ಲಿ ಸಿಕ್ಕಿವೆ. ದಕ್ಷಿಣ ಕನ್ನಡ ಎಸಿಬಿ ಎಸ್ಪಿ ಬೋಪಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.