ಡೆತ್​ನೋಟ್​ನಲ್ಲಿ ನಾಲ್ವರ ಹೆಸರು ಬರೆದು ಯುವತಿ ಆತ್ಮಹತ್ಯೆ! ಮದ್ವೆ ಆಗಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

suicide
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಿನ್ನೆ(ಭಾನುವಾರ) ರಾತ್ರಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಇಂದು(ಸೋಮವಾರ) ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ.

ನೆತ್ರಕೆರೆ ನಿವಾಸಿ ನಿಶ್ಮಿತಾ(22) ಮೃತ ದುರ್ದೈವಿ. ಡೆಂಟಲ್ ಕ್ಲಿನಿಕ್​ವೊಂದರಲ್ಲಿ ಕೆಲಸ‌ ಮಾಡುತ್ತಿದ್ದ ಯುವತಿ, ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಸೋಮವಾರ ಬಳಗ್ಗೆ ವಿಟ್ಲದ ನೆತ್ರಕೆರೆಯಲ್ಲಿ ನಿಶ್ಮಿತಾಳ ಪತ್ತೆಯಾಗಿದೆ. ಸ್ಥಳದಲ್ಲಿ ಆಕೆಯ ಮೊಬೈಲ್​ ಮತ್ತು ಡೆತ್​ನೋಟ್ ಪತ್ತೆಯಾಗಿದೆ.

ಡೆತ್​ನೋಟ್​ನಲ್ಲಿ ನಾಲ್ವರ ಹೆಸರನ್ನು ಬರೆದಿರುವ ನಿಶ್ಮಿತಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್​ನೋಟ್​ನಲ್ಲಿ ಬೇರೆ ಏನೆಲ್ಲ ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ನಿಶ್ಮಿತಾಗೆ ಮದುವೆ ನಿಶ್ಚಯ ಆಗಿತ್ತು. ಮದುವೆ ಆಗಬೇಕಿದ್ದ ಯುವಕನಿಗೆ ನಿಶ್ಮಿತಾ ಈ ಹಿಂದೆ ಬೇರೋಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ವಿಷ್ಯ ಗೊತ್ತಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ನೊಂದ ನಿಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net