More

    ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನ ಡೇಟಿಂಗ್‌ಗೆಂದು ಮನೆಗೆ ಕರೆದೊಯ್ದ ಯುವತಿ! ಮುಂದೆ ಆಗಿದ್ದೆಲ್ಲವೂ ದುರಂತ

    ಬೆಂಗಳೂರು: ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನು ಪರಿಚಯ ಮಾಡಿಕೊಂಡು ಡೇಟಿಂಗ್‌ಗೆಂದು ಮನೆಗೆ ಕರೆದುಕೊಂಡು ಹೋದ ಯುವತಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾಳೆ. ಎನ್‌ಎಸ್ ಪಾಳ್ಯದ ನೇಹಾ ಫಾತೀಮಾ(24) ಮತ್ತು ಈಕೆಯ ಇಬ್ಬರು ಸಹಚರರು ಬಂಧಿತರು. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಆಗ್ನೇಯಾ ವಿಭಾಗ ಡಿಸಿಪಿ ಶ್ರೀನಾಥ್ ಜ್ಯೋಷಿ ತಿಳಿಸಿದ್ದಾರೆ.

    ಮುನೇಶ್ವರನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ 34 ವರ್ಷದ ಟೆಕ್ಕಿ, ಸೆ.29ರಂದು ತರಕಾರಿ ಖರೀದಿಗಾಗಿ ನೇಹಾಳ ಅಂಗಡಿಗೆ ಹೋಗಿದ್ದಾರೆ. ಜೋರು ಮಳೆ ಬಂದ ಕಾರಣ ಅಲ್ಲೇ ಸ್ವಲ್ಪ ಸಮಯ ಟೆಕ್ಕಿ ಆಶ್ರಯ ಪಡೆದಾಗ ಇಬ್ಬರಿಗೂ ಪರಿಚಯವಾಗಿ ಪರಸ್ಪರ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿಂದ ಹೊರಟ ಟೆಕ್ಕಿಯ ಜತೆ ನಿರಂತರವಾಗಿ ಸಂಭಾಷಣೆ, ಚಾಟಿಂಗ್ ಮಾಡುತ್ತಿದ್ದ ಯುವತಿ, ಇಬ್ಬರ ನಡುವೆ ಸಲುಗೆ ಬೆಳೆದು ಒಟ್ಟಿಗೆ ಔಟಿಂಗ್ ಹೋಗೋಣ ಎಂದು ಪರಸ್ಪರ ಒಪ್ಪಿಕೊಂಡಿದ್ದರು. ಅಲ್ಲದೆ, ನನ್ನ ಕುಟುಂಬ ಸದಸ್ಯರನ್ನು ಪರಿಚಯ ಮಾಡಿಸಿಕೊಡುತ್ತೇನೆ. ಮನೆಗೆ ಬನ್ನಿ ಎಂದು ಯುವತಿ ನಂಬಿಸಿದ್ದಳು. ಇದಕ್ಕೆ ಒಪ್ಪಿದಾಗ ಅ.6ರಂದು ಟೆಕ್ಕಿ ಕಾರಿನಲ್ಲಿ ಯುವತಿ ಕುಳಿತುಕೊಂಡು ಬಿಟಿಎಂ ಲೇಔಟ್ 2ನೇ ಹಂತದ ಎನ್‌.ಎಸ್‌.ಪಾಳ್ಯ ಹತ್ತಿರದಲ್ಲಿ ಇರುವ ಮನೆಗೆ ಕರೆದುಕೊಂಡು ಹೋಗಿದ್ದಳು. ಮನೆಯ ಒಳಗಿನಿಂದ ಲಾಕ್ ಹಾಕಿಕೊಂಡು ಇಬ್ಬರು ಬಿಯರ್ ಬಾಟಲ್ ಓಪನ್ ಮಾಡಿದ್ದರು. ಆನಂತರ ಟೆಕ್ಕಿಗೆ ಬಟ್ಟೆ ಕಳಚುವಂತೆ ಒತ್ತಾಯ ಮಾಡಿದ್ದು, ಆತ ಬಟ್ಟೆ ಬಿಚ್ಚಿದ್ದರು.

    ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನ ಡೇಟಿಂಗ್‌ಗೆಂದು ಮನೆಗೆ ಕರೆದೊಯ್ದ ಯುವತಿ! ಮುಂದೆ ಆಗಿದ್ದೆಲ್ಲವೂ ದುರಂತ

    ಮೊದಲೇ ಸಂಚು ರೂಪಿಸಿದಂತೆ ನಾಲ್ಕೈದು ಜನರು ಏಕಾಏಕಿ ಬಾಗಿಲು ಬಡಿದು ಕೂಗಾಡಿದರು. ಬಾಗಿಲು ತೆಗೆಯುತ್ತಿದಂತೆ ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಈಕೆ ನನ್ನ ಸಹೋದರಿ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾಕೇ ಒಳಗೆ ಬಂದಿದ್ದೀಯಾ? ಏನು ಮಾಡುತ್ತಿದ್ದೀಯಾ? ಎಂದು ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದರು. ಟೆಕ್ಕಿ ಬಳಿಯಿದ್ದ ಕಾರು, 5 ಸಾವಿರ ರೂ. ನಗದು, ವಾಚ್, ಮೊಬೈಲ್ ಕಿತ್ತುಕೊಳ್ಳುತ್ತಾರೆ. ಆ ನಂತರ 10 ಲಕ್ಷ ರೂ. ಕೊಡಬೇಕು. ಇಲ್ಲವಾದರೆ, ವಿಡಿಯೋ ವೈರಲ್ ಮಾಡಿ ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಭಯಕ್ಕೆ ಟೆಕ್ಕಿ, ಎಟಿಎಂ ಕಾರ್ಡ್ ಕೊಟ್ಟಿದ್ದು, ಅದರಿಂದ 32 ಸಾವಿರ ರೂ. ಡ್ರಾ ಮಾಡಿದ್ದರು. 10 ಲಕ್ಷ ರೂ. ತಂದು ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಿ ಟೆಕ್ಕಿಯನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ನೊಂದ ಟೆಕ್ಕಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್ ಮಾಡಿದ್ದ ಯುವತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಯ್ಬಿಟ್ಟಿದ್ದ ಯುವತಿ: ಟೆಕ್ಕಿ ನೀಡಿದ ದೂರಿನ ಮೇರೆಗೆ ಯುವತಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಈಕೆ ಕೊಟ್ಟ ಸುಳಿವಿನ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಹಿಂದೆ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದರಾ? ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಜೂಜು ಅಡ್ಡೆ ಮೇಲೆ ದಾಳಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಜಿಗಿದಿದ್ದ ವ್ಯಕ್ತಿ ಸಾವು

    ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

    ಥೂ, ಇವನೆಂಥಾ ಕಾಮುಕ? ಯುವಕನ ಮೇಲೇ ರೇಪ್​!

    ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts