

ಮೈಸೂರು: ಕರೊನಾ ಸೋಂಕಿತ ವ್ಯಕ್ತಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ್ಲಿ ಸಂಭವಿಸಿದೆ.
ಎಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದಲ್ಲಿ ಕರೊನಾ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ಆಗಿದ್ದರು. ಇವರು ಮನೆಯಿಂದ ಹೊರ ಬಂದಿದ್ದು ಇದೇ ವಿಚಾರಕ್ಕೆ ತಗಾದೆ ತೆಗೆದ ಕೆಲವರಿದ್ದ ಗುಂಪೊಂದು ಮನಸೋಇಚ್ಛೆ ಕಲ್ಲುಬಿಸಿದೆ.
ಕಲ್ಲೇಟಿನಿಂದ ಗಂಭೀರ ಗಾಯಗೊಂಡ ಕರೊನಾ ಸೋಂಕಿತನನ್ನು ಎಚ್.ಡಿ ಕೋಟೆ ಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಪುರ ಗ್ರಾಮದ ಮುತ್ತಯ್ಯ, ದಾಸೇಗೌಡ, ಬಲರಾಮ ಎಂಬುವವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.