ನಾನು ಸುರಕ್ಷಿತವಾಗಿದ್ದೇನೆ, ತಂದೆ-ತಾಯಿ ಬಳಿ ಸದ್ಯಕ್ಕೆ ಬರಲ್ಲ ಎಂದ ಸಿಡಿ ಲೇಡಿ: ಹೇಬಿಯಸ್​ ಕಾರ್ಪಸ್​ ಅರ್ಜಿ ಇತ್ಯರ್ಥ

CD case
Published on

ಧಾರವಾಡ: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಯುವತಿಯ ತಂದೆ ಸಲ್ಲಿಸಿದ್ದ ಹೇಬಿಯಸ್​ ಕಾರ್ಪಸ್​ ಅರ್ಜಿಯನ್ನು ಸೋಮವಾರ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದೆ.

ನನ್ನ ಮಗಳನ್ನು ಭೇಟಿ ಮಾಡಲು ಬಿಡುತ್ತಿಲ್ಲ, ಯಾರೋ ಬಲವಂತವಾಗಿ ಅವಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಿಡಿ ಕೇಸ್​ನ ಯುವತಿ ಪಾಲಕರು ಆರೋಪಿಸಿದ್ದರು. ಮೇ 27ರಂದು ಯುವತಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು. ಇಂದು ನಡೆದ ವಿಡಿಯೋ ಕಾನ್ಫರೆನ್ಸ್​ನಲ್ಲಿ ವಿಚಾರಣೆಗೆ ಹಾಜರಾದ ಯುವತಿ, ನಾನು ಸುರಕ್ಷಿತವಾಗಿ ಇದ್ದೇನೆ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಸದ್ಯಕ್ಕೆ ನಾನು ತಂದೆ-ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ ಎಂದಳು.

ಯುವತಿಯ ಹೇಳಿಕೆ ಬಳಿಕ ಅರ್ಜಿ ನ್ಯಾಯಾಲಯ ಅರ್ಜಿಯನ್ನ ಇತ್ಯರ್ಥ ಪಡಿಸಿತು. ಎಸ್‌ಐಟಿ ವಿಚಾರಣೆ ಮುಗಿದ ಬಳಿಕ‌ ತಂದೆಯನ್ನು ಭೇಟಿಯಾಗುವುದಾಗಿ ಯುವತಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net