ಹರಕೆ ಮುಡಿ ಕೂದಲು ಪ್ರಕರಣ: ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಪರ ಐತಿಹಾಸಿಕ ತೀರ್ಪು!

nanjanagudu
Published on

ಮೈಸೂರು: ಹರಕೆ ಮುಡಿ ಕೂದಲು ಪ್ರಕರಣ ಸಂಬಂಧ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಪರ ತಿ.ನರಸೀಪುರ ಸಿವಿಲ್ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಬಂದಿದೆ.

ಹರಕೆ ಮುಡಿ ಕೂದಲು ತೆಗೆಯುವ ಹಾಗೂ ಮುಡಿ ಕೂದಲಿನ ಸಂಪೂರ್ಣ ಹಕ್ಕು ತಮ್ಮದೇ ಎಂದು ನಯನಜಕ್ಷತ್ರಿಯ ಸಂಘ ದಾವೆ ಹೂಡಿತ್ತು. ಕೂದಲಿನ‌ ಸಂಪೂರ್ಣ ಹಕ್ಕು ದೇವಾಲಯಕ್ಕೆ ಸೇರಿದ್ದು ಎಂದು ದೇವಾಲಯದ ಆಡಳಿತ ಮಂಡಳಿ ಪ್ರತಿಪಾದಿಸಿತ್ತು.

25 ವರ್ಷಗಳಿಂದ ನಡೆಯುತ್ತಿದ್ದ ಹರಕೆ ಮುಡಿ ಕೂದಲು ಪ್ರಕರಣದ ವಾದ-ವಿವಾದಕ್ಕೆ ಅಂತಿಮ ತೆರೆ ಬಿದ್ದಿದ್ದು, ಇನ್ಮುಂದೆ ಮುಡಿ ಕೂದಲಿನ ಸಂಪೂರ್ಣ ಹಕ್ಕು ದೇವಾಲಯದ್ದು. ಮುಡಿ ಕೂದಲು ತೆಗೆಯುವ ಕಾರ್ಯ ಮಾತ್ರ ನಯನಜಕ್ಷತ್ರಿಯ ಸಂಘಕ್ಕೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮುಡಿ ಕೂದಲಿನ ಸಂಪೂರ್ಣ ಹಕ್ಕಿನಿಂದ ದೇವಾಲಯಕ್ಕೆ ಮತ್ತಷ್ಟು ಆದಾಯ ಹೆಚ್ಚಲಿದೆ.

ಕೇವಲ ಮುಡಿ ತೆಗೆಯುವುದರಿಂದ ನಮ್ಮ ಬದುಕು ಹಸನಾಗುವುದಿಲ್ಲ. ಕೂದಲಿನಿಂದ ಬರುವ ಆದಾಯದಲ್ಲಿ ಇದರಿಂದ ಬರುವ ಆದಾಯದಲ್ಲಿ ಅನಾದಿಕಾಲದಿಂದಲೂ ಪ್ರತಿ ವರ್ಷ ದೊಡ್ಡಜಾತ್ರೆ ,ಚಿಕ್ಕಜಾತ್ರೆ ಗಿರಿಜಾ ಕಲ್ಯಾಣ ಕಾರ್ತಿಕ ಮಾಸಗಳಲ್ಲಿ ವಿವಿಧ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ದೇವಾಲಯದ ಪರ ತೀರ್ಪು ಬಂದಿರುವ ವಿಚಾರ ನಮಗೆ ಅಷ್ಟಾಗಿ ತಿಳಿದಿಲ್ಲ. ನಾವು ಕೂಡ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net