

ಕಲಬುರಗಿ: ಎರಡೂವರೆ ವರ್ಷದ ಹಿಂದೆ ಸಿವಿಲ್ ಇಂಜಿನಿಯರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಮಂಗಳವಾರ ರಾತ್ರಿ ದುರಂತ ಅಂತ್ಯ ಕಂಡಿದ್ದಾಳೆ.
ರಚಿತಾ (21) ಮೃತ ದುರ್ದೈವಿ. ಸಿವಿಲ್ ಇಂಜಿನಿಯರ್ ವೀರಣ್ಣ ಎಂಬುವರ ಜತೆ ಮದುವೆಯಾಗಿದ್ದ ರಚಿತಾ ಕಲಬುರಗಿಯ ಬ್ಯಾಂಕ್ ಕಾಲನಿಯಲ್ಲಿ ವಾಸವಿದ್ದಳು.
ಮದುವೆ ಆದ ದಿನದಿಂದಲೂ ವರದಕ್ಷಿಣೆ ತರುವಂತೆ ರಚಿತಾಗೆ ಗಂಡ ಕಿರುಕುಳ ಕೊಟ್ಟಿದ್ದನಂತೆ. ರಚಿತಾಳ ಸಾವಿಗೂ ಮುನ್ನಾ ದಿನವೂ ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಗಲಾಟೆ ಮಾಡಿದ್ದನಂತೆ. ಇದರಿಂದ ಮನನೊಂದ ರಚಿತಾ ಮನೆಯಲ್ಲೇ ನೇಣುಬಿಗಿದುಕೊಂಡು ಸತ್ತಿದ್ದಾಳೆ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಚಿತಾಳ ಗಂಡ ವೀರಣ್ಣ, ಮಾವ ಚಂದ್ರಕಾಂತ್, ಅತ್ತೆ ಲಕ್ಷ್ಮೀಬಾಯಿ, ಮೈದುನ ಪವನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.