More

    ತಮಾಷೆಯ ‘ಬಾಂಬ್’ ಹಾಕಿ; ಸಂಕಷ್ಟಕ್ಕೆ ಸಿಲುಕಿದ ಯುವಕ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬ್ಯಾಗ್‌ವೊಂದರಲ್ಲಿ ಬಾಂಬ್ ಇದೆ ಎಂದು ತಮಾಷೆ ಮಾಡಲು ಹೋದ ಪ್ರಯಾಣಿಕ ಪೊಲೀಸರು ಅತಿಥಿಯಾಗಿದ್ದಾನೆ.

    ಹರಿಯಾಣ ಮೂಲದ ರಾಜೇಶ್‌ಕುಮಾರ್ ದೇನಿವಾಲ್. ಮೇ 15ರಂದು ರಾತ್ರಿ 10 ಗಂಟೆಗೆ ಕೆಐಎಯಿಂದ ಪುಣೆಗೆ ಹೋಗಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ. ಟರ್ಮಿನಲ್-2ಗೆ ಬಂದಾಗ ರಾಜೇಶ್, ಹ್ಯಾಂಡ್ ಬ್ಯಾಗೇಜ್ ಚೆಕ್‌ಇನ್‌ಗೆ ಸೆಕ್ಯೂರಿಟಿ ಅಧಿಕಾರಿಗಳು ಮುಂದಾಗಿದ್ದರು. ಆಗ ಬ್ಯಾಗ್‌ನಲ್ಲಿ ಬಾಂಬ್ ಹುದುಗಿಸಿಟ್ಟಿರುವುದಾಗಿ ಬೆದರಿಕೆ ಹಾಕಿದ್ದ.

    ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಾಜೇಶ್ ಬ್ಯಾಗ್‌ಗಳನ್ನು ತಪಾಸಣೆ ಮಾಡಿದರು. ಯಾವುದೇ ಅನುಮಾನಸ್ಪದ ವಸ್ತುಗಳು ಕಾಣದೆ ಇದ್ದಾಗ ರಾಜೇಶ್‌ನನ್ನು ವಶಕ್ಕೆ ಪಡೆದು ಕೆಐಎ ಠಾಣೆಗೆ ಒಪ್ಪಿಸಿ ದೂರು ಸಲ್ಲಿಸಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ‘ತಮಾಷೆಗೆ ಹೇಳಿದ್ದಾಗಿ’ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts