More

  ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ  ಕಟ್ಟಡ ಕಾರ್ಮಿಕರ ರಾಜ್ಯ ಸಂಘದ ಗಡುವು 

  ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ನೀಡಬೇಕಿರುವ ಸೌಲಭ್ಯಗಳ ಕುರಿತ ಅರ್ಜಿಗಳ ವಿಲೇವಾರಿ ಹಾಗೂ ಸಮಸ್ಯೆಗಳ ಕುರಿತಂತೆ ಚರ್ಚಿಸಿ ಪರಿಹರಿಸಲು ಕಾರ್ಮಿಕ ಸಚಿವರಿಗೆ ಜುಲೈ ಮೊದಲ ವಾರದವರೆಗೆ ಗಡುವು ನೀಡಲಾಗಿದೆ ಎಂದು ಕರ್ನಾಟಕ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್ ತಿಳಿಸಿದರು.
  ಸಚಿವರು ನಿರ್ಲಕ್ಷೃ ವಹಿಸಿದ್ದಲ್ಲಿ ಜುಲೈ ಮೂರನೇ ವಾರದಲ್ಲಿ ಧಾರವಾಡ ಚಲೋ ಹಮ್ಮಿಕೊಂಡು ಅಲ್ಲಿನ ಕಾರ್ಮಿಕ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು  ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಕಾರ್ಮಿಕ ಸಂಘಟನೆಗಳೊಂದಿಗೆ ದರ್ಪದಿಂದ ಮಾತನಾಡುವ ಸಂತೋಷ್ ಲಾಡ್ ಅವರನ್ನು ಸರ್ಕಾರ ಬದಲಾಯಿಸಿ ಕಾರ್ಮಿಕರಿಗೆ ಸ್ಪಂದಿಸುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದೂ ಆಗ್ರಹಿಸಿದರು.
  ಅನಗತ್ಯವಾದ ಟೂಲ್, ಯೂಮಿನಿಟಿ ಕಿಟ್ ಮತ್ತು ಇತರೆ ವಸ್ತುಗಳ ವಿತರಣೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕರೊನಾ ನಂತರದಲ್ಲೂ ನಿವೃತ್ತಿ ಪಿಂಚಣಿ, ಹೆರಿಗೆ ಭತ್ಯೆ, ಸಹಾಯಧನಕ್ಕೆ ಮೀಸಲಾದ ಹಣವನ್ನು ಕಿಟ್‌ಗಳಿಗೆ ಬಳಕೆ ಮಾಡಲಾಗಿದೆ. ಇದನ್ನು ವಿರೋಧಿಸಿ ಹೋರಾಟ ಮಾಡಲಾಗಿದ್ದರೂ ಕಮೀಷನ್ ಕಾರಣಕ್ಕೆ ಕಿಟ್ ಖರೀದಿ ನಡೆಸಲಾಗಿತ್ತು.
  ಎಐಟಿಯುಸಿ ಮತ್ತು ಇತರೆ ಕಾರ್ಮಿಕ ಸಂಘಟನೆಗಳು ಸಭೆ ನಡೆಸಿ, ಉಪಯೋಗವಿಲ್ಲದ ಕಿಟ್ ಖರೀದಿ ತಡೆಯುವಂತೆ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಕಿಟ್ ವಿತರಣೆ ನಿಲ್ಲಿಸಬೇಕೆಂದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮಾಹಿತಿ ನೀಡಿದರು. ಈ ಹಿಂದೆಯೇ ಖರೀದಿಸಿದ್ದರ ನೆವ ಹೇಳುತ್ತಿರುವ ಕಾರ್ಮಿಕ ಕಲ್ಯಾಣ ಮಂಡಳಿ, ವಿತರಣೆಗೆ ಮುಂದಾಗಿದೆ ಎಂದೂ ದೂರಿದರು.
  ರಾಜ್ಯದಲ್ಲಿ 15 ಲಕ್ಷ ನೈಜ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಆನ್‌ಲೈನ್ ನೊಂದಣಿ ಮಾದರಿಯಡಿ ಇದುವರೆಗೆ 44 ಲಕ್ಷ ಕಾರ್ಮಿಕರಿದ್ದಾರೆ. ಬೋಗಸ್ ಕಾರ್ಮಿಕರ ತಡೆಯುವ ಹಿನ್ನೆಲೆಯಲ್ಲಿ ಸೇವಾಸಿಂಧುಗಳಿಗೆ ನೀಡಲಾಗಿಉವ ನೋಂದಣಿ, ನವೀಕರಣದ ಅವಕಾಶ ತಡೆಹಿಡಿಯಬೇಕು. ಇಲಾಖೆಯಿಂದಲೇ ಇದನ್ನು ನಿರ್ವಹಿಸಬೇಕು ಎಂದೂ ಆಗ್ರಹಿಸಿದರು.
  ಸಂಘಟನೆಯ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ್, ಶಿವಕುಮಾರ್ ಡಿ. ಶೆಟ್ಟರ್, ಮುರುಗೇಶ್, ಯರಗುಂಟೆ ಸುರೇಶ್, ಸಿದ್ದೇಶ್, ಕೆ. ಸುರೇಶ್, ಡಿ. ಷಣ್ಮುಗಂ ಸುದ್ದಿಗೋಷ್ಠಿಯಲ್ಲಿದ್ದರು.

  See also  ದಾವಣಗೆರೆಯಲ್ಲಿ ಯುವ ಸಮಾವೇಶ ಜ. 12ಕ್ಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts