ಮಂಗಳೂರಲ್ಲಿ ಕೋಟ್ಯಂತರ ಮೌಲ್ಯದ ಗಾಂಜಾ ಸಾಗಾಟ: ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ವೈದ್ಯೆ!

ganja
Published on

ಮಂಗಳೂರು: ವೈದ್ಯರನ್ನ ಸಾಕ್ಷಾತ್​ ದೇವರು ಎನ್ನುತ್ತಾರೆ. ಆದರೆ ಇಲ್ಲೊಬ್ಬ ವೈದ್ಯೆ ಮಾದಕ ವಸ್ತು ಗಾಂಜಾ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.

ಕೋಟಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ವೈದ್ಯೆ ಸಹಿತ ಇಬ್ಬರನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕಾಂಞಗಾಡ್​ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಮತ್ತು ಕಾಸರಗೋಡಿನ ಅಜ್ಮಲ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿರುವ ಡಾ‌.ನದೀರ್ ಸೂಚನೆಯಂತೆ ಇವರಿಬ್ಬರು ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು. ನದೀರ್ ಮತ್ತು ಅಜ್ಮಲ್ ಜತೆ ಸ್ನೇಹ ಹೊಂದಿದ್ದ ವಿನುರಶ್ಮಿ ರೈಲು ಮೂಲಕ ಮಂಗಳೂರಿಗೆ ಬಂದು ಕಾರಿನಲ್ಲಿ ದೇರಳಕಟ್ಟೆಗೆ ಬಂದಿದ್ದಳು. ಇದನ್ನೂ ಓದಿರಿ ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!

ಕಾಂಞಗಾಡ್​ನಿಂದ ಗಾಂಜಾ ತೆಗೆದುಕೊಂಡು ಬಂದ ವೈದ್ಯೆ ದೇರಳಕಟ್ಟೆಯಲ್ಲಿ ನದೀರ್ ಸ್ನೇಹಿತನಿಗೆ ಕೊಡಲು ಯತ್ನಿಸಿದ್ದಳು. ಈ ವೇಳೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 1.236 ಕೆಜಿ ಹೈಡ್ರೋವೀಡ್ ಗಾಂಜಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸುಮಾರು 30 ಲಕ್ಷದಿಂದ 1 ಕೋಟಿ ರೂ. ಮೌಲ್ಯದ್ದು ಎನ್ನಲಾಗಿದೆ. ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಇಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net