ಪತ್ನಿ ತವರಿಗೆ ಹೋದ ಬೆನ್ನಲ್ಲೇ ಲಕ್ಷ್ಮೀ ದೇವಸ್ಥಾನದಲ್ಲಿ ನೇಣುಬಿಗಿದುಕೊಂಡ ಗಂಡ!

suicide
Published on

ಚಿಕ್ಕೋಡಿ: ದೇವಸ್ಥಾನದಲ್ಲಿಯೇ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಅಶೋಕ ಪೂಜೇರಿ(36) ಮೃದ ದುರ್ದೈವಿ. ಕುಡಿತದ ಚಟ ಅಂಟಿಸಿಕೊಂಡಿದ್ದ ಈತ ಪತ್ನಿಯೊಂದಿಗೆ ಜಗವಾಡಿದ್ದ. ಇದೇ ವಿಚಾರಕ್ಕೆ ಮುನಿಸಿಕೊಂಡು ಪತ್ನಿ ಇತ್ತೀಚಿಗೆ ತವರು ಮನೆ ಸೇರಿದ್ದಳು. ಇದರಿಂದ ಜಿಗುಪ್ಸೆಗೊಂಡ ಅಶೋಕ ಪೂಜೇರಿ ಲಕ್ಷ್ಮೀ ದೇವಸ್ಥಾನದಲ್ಲಿ ನೇಣುಬಿಗಿದುಕೊಂಡು ಸತ್ತಿದ್ದಾನೆ. ಸ್ಥಳಕ್ಕೆ ಬಂದು ಹುಕ್ಕೇರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net