

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೊಸೂರು ತಾಂಡಾ ಗ್ರಾಮದ ಬಳಿ 22 ವರ್ಷದ ಯುವತಿ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಮೃತದೇಹದ ಬಳಿ ಚಾಕು ಮತ್ತು ಆಸಿಡ್ ಬಾಟಲಿ ಸಿಕ್ಕಿದೆ.
ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಮಾನಸ(22) ಮೃತ ದುರ್ದೈವಿ. ಚಳ್ಳಕೆರೆಯ ಅಂಚೆ ಕಚೇರಿಯಲ್ಲಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಆಗಿದ್ದಳು.
ಹೊಸೂರು ತಾಂಡಾ ಗ್ರಾಮದಲ್ಲಿ ಮಾನಸ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆ ಬಳಿಕ ಬಯಲಾಗಲಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.