ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

murder-1
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರ ಹೊರವಲಯದ ನರ್ಸಿಂಗ್ ಕಾಲೇಜು ಎದುರು ಕೊಲೆಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನ ಪ್ರಕರಣ ಸಂಬಂಧ ನಾಲ್ವರು ಸಂಲಿಗಕಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜು.4ರ ರಾತ್ರಿ ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಒಳಗಡೆ ನಿಲ್ಲಿಸುವುದಾಗಿ ಹೊರ ಹೋಗಿದ್ದ ಭೂಮನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ವಿಶ್ವನಾಥ್(42) ಅಂದು ಕಾಣೆಯಾಗಿದ್ದರು. ಹುಡುಕಿಕೊಂಡ ಹೊರಟ ಕುಟುಂಬಸ್ಥರಿಗೆ ಬೆತ್ತಲೆ ಸ್ಥಿತಿಯಲ್ಲಿ ಬರ್ಬರ ಹತ್ಯೆವಾಗಿ ಹತ್ಯೆಯಾಗಿದ್ದ ವಿಶ್ವನಾಥ್ ಮೃತದೇಹ ನರ್ಸಿಂಗ್ ಕಾಲೇಜು ಎದುರಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಂತಕರ ಪತ್ತೆಗೆ ಬಲೆ ಬೀಸಿದ್ದರು. ಸಲಿಂಗಕಾಮಿಗಳು ಶಿಕ್ಷಕ ವಿಶ್ವನಾಥ್​ರನ್ನು ಕೊಂದಿರುವ ಆಘಾತಕಾರಿ ಅಂಶ ತನಿಖೆಯಲ್ಲಿ ಬಯಲಾಗಿದ್ದು, ನಾಲ್ವರು ಸಲಿಂಗಕಾಮಿಗಳನ್ನು ಬಂಧಿಸಲಾಗಿದೆ. ಶಿಕ್ಷಕನನ್ನು ಸಲಿಂಗಕಾಮಕ್ಕೆ ಕರೆದಿದ್ದು, ಇದಕ್ಕೆ ಅವರು ಒಪ್ಪಿಲ್ಲ. ಕಾಮತೃಷೆ ತೀರಿಸದ ಹಿನ್ನೆಲೆ ಕಿಡಿಗೇಡಿಗಳು ಶಿಕ್ಷಕನನ್ನು ನಿರ್ಜನ‌ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳಾದ ಆಕಾಶ್, ಮನು, ಮಂಜುನಾಥ, ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net