ರಾತ್ರೋರಾತ್ರಿ ಮನೆಗೆ ಬೆಂಕಿ ಬಿದ್ದು ಗ್ರಾಮ ಪಂಚಾಯಿತಿ ಸದಸ್ಯ ಸಜೀವ ದಹನ!

gp member somashekhar
Published on

ಚಿಕ್ಕೋಡಿ: ಮನೆಗೆ ಬೆಂಕಿ ಬಿದ್ದು ಗ್ರಾಮ ಪಂಚಾಯಿತಿರೊಬ್ಬರು ಸದಸ್ಯ ಸಜೀವ ದಹನ ಆದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಿನ್ನೆ(ಬುಧವಾರ) ತಡರಾತ್ರಿ ಸಂಭವಿಸಿದೆ.

ಸೋಮಶೇಖರ್ ಶಿವಾನಂದ ಪಾಟೀಲ್(32) ಮೃತ ದುರ್ದೈವಿ. ಇವರು ಶಿರಗುಪ್ಪಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಇವರೊಬ್ಬರೇ ಮಲಗಿದ್ದರು. ಈ ವೇಳೆ ಎಸಿ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಮನೆಗೆ ಬೆಂಕಿ ಆವರಿಸಿದ್ದು, ಸೋಮಶೇಖರ್​ ಸಜೀವ ದಹನ ಆಗಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಕರೊನಾದಿಂದ ಗುಣಮುಖಳಾಗಿ ಬಂದ ತಾಯಿಯನ್ನ ಮನೆಗೆ ಸೇರಿಸಿಕೊಳ್ಳದ ಮಗ: ನೊಂದ ತಾಯಿ ಆತ್ಮಹತ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net