

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದೊಳಗಿನ ಕೆಮಿಕಲ್ ಘಟಕದಲ್ಲಿ ಶನಿವಾರ ಮಧ್ಯಾಹ್ನ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಇಡೀ ಘಟಕದಿಂದ ಭಾರಿ ಪ್ರಮಾಣದಲ್ಲಿ ಬೆಂಕಿ, ಹೊಗೆ ಹೊರಬರುತ್ತಿದೆ. ಸ್ಫೋಟಕಗಳ ಸದ್ದೂ ಕೇಳಿ ಬರುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿರುವ ಸಾಧ್ಯತೆ ಗೋಚರಿಸಿದೆ.
ಆಂತಿಯಾ ಆರೊಮೆಟಿಕ್ಸ್ ಎನ್ನುವ ಮಹಾರಾಷ್ಟ್ರ ಮೂಲದ ಕಂಪನಿಯ ಸಹಸಂಸ್ಥೆಯಾಗಿರುವ ಕೆಟಸಿಂತ್ ಕೆಮಿಕಲ್ಸ್ ಎನ್ನುವ ಪರ್ಫ್ಯೂಮ್ ತಯಾರಿಕಾ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ.
ಎಂಎಸ್‌ಇಝಡ್ ಆವರಣದ ಒಳಗಿರುವ ಹಲವು ಪೆಟ್ರೋಕೆಮಿಕಲ್ಸ್ ಘಟಕಗಳಲ್ಲಿ ಇದೂ ಒಂದು. ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕಂಪನಿಯ ಮ್ಯಾನೇಜರ್ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಸರದಲ್ಲಿ ರಾಸಾಯನಿಕ ಉರಿಯುವ ಕಟು ವಾಸನೆ ಆವರಿಸಿದೆ. (ಇದು ಸಂಜೆ 4ರ ವರೆಗಿನ ಮಾಹಿತಿ)
a