ತಂದೆಯನ್ನು ಕೊಂದು ಶವವನ್ನು ಮನೆಯ ಹೊರಗೆ ಹಾಕಿದ ತಾಯಿ-ಮಗ!

murder case
Published on

ಬಾದಾಮಿ: ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ತಂದೆಯ ತಲೆಯನ್ನು ಹಿಟ್ಟಿಗೆಯಿಂದ ಜಜ್ಜಿ ಕೊಂದು ಶವವನ್ನ ಮೆನೆಯ ಹೊರಗೆ ಹಾಕಿದ್ದಾರೆ.

ಇಂತಹ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಬಸಪ್ಪ ಹನಮಪ್ಪ(55) ಕೊಲೆಯಾದ ದುರ್ದೈವಿ. ಬಸಪ್ಪನ ಪತ್ನಿ ಮಹಾಂತವ್ವ ಮತ್ತು ಮಗ ಶಿವಪ್ಪ ಕೊಲೆ ಆರೋಪಿಗಳು. ಇದನ್ನೂ ಓದಿರಿ ಜೆಡಿಎಸ್​ನಲ್ಲಿ ಬಕೆಟ್ ಹಿಡಿಯುವವರಿಗಷ್ಟೆ ಮಣೆ… ಜೆಡಿಎಸ್​ನ​ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ರಾಜೀನಾಮೆ

ತಂದೆ ಬಸಪ್ಪ ಮತ್ತು ಮಗ ಶಿವಪ್ಪ ಇಬ್ಬರೂ ಕಂಠಪೂರ್ತಿ ಕುಡಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ಬಸಪ್ಪ ಮನೆಯಲ್ಲಿ ನಿತ್ಯ ಜಗಳ ಮಾಡುತ್ತಿದ್ದ. ಗುರುವಾರ ಕುರಿ ಮಾರಾಟದಿಂದ ಬಂದ ಹಣದಲ್ಲಿ ಮದ್ಯ ಸೇವಿಸಿ ಬಸಪ್ಪ ಬಂದಿದ್ದ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಜಗಳ ಆರಂಭವಾಗಿದ್ದು, ಸಿಟ್ಟಿಗೆದ್ದ ಮಗ ತಂದೆಗೆ ಹಿಟ್ಟಿಗೆಯಿಂದ ಹೊಟ್ಟೆ ಮತ್ತು ಹಣೆಗೆ ಹೊಡೆದು ಕೊಂದಿದ್ದಾನೆ. ಇದಕ್ಕೆ ತಾಯಿಯೂ ಸಾಥ್​ ಕೊಟ್ಟಿದ್ದಾಳೆ. ಸತ್ತ ಬಳಿಕ ಶವವನ್ನು ಮನೆಯಿಂದ ಹೊರಗೆ ಹಾಕಿದ್ದರು.

ಈ ಕುರಿತು ಕುಮಾರ ಹನಮಗೌಡ ಹೊಸಗೌಡ್ರ ಎಂಬುವರು ದೂರು ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿ.ಎಸ್.ಪಿ.ಚಂದ್ರಕಾಂತ ನಂದರಡ್ಡಿ, ಸಿಪಿಐ ರಮೇಶ ಹಾನಾಪೂರ, ಪಿ.ಎಸ್.ಐ.ನೇತ್ರಾವತಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net