ಬೆಳಗಾವಿ ಲೋಕಸಭೆ ಬೈಎಲೆಕ್ಷನ್​ನ ಚುನಾವಣಾಧಿಕಾರಿಯಾಗಿದ್ದ ಶಿರಸ್ತೇದಾರ್​ ವಿಜಯಶ್ರೀ ಕರೊನಾಗೆ ಬಲಿ

covid death
Published on

ಬೆಳಗಾವಿ: ಇತ್ತೀಚೆಗಷ್ಟೇ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಶಿರಸ್ತೇದಾರ್​ ವಿಜಯಶ್ರೀ ನಾಗನೂರಿ ಕೋವಿಡ್​ಗೆ ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದಲ್ಲಿ ಶಿರಸ್ತೇದಾರ್​ ಆಗಿದ್ದ ವಿಜಯಶ್ರೀ ಅವರು ಯಮನಾಪುರದಲ್ಲಿ ವಾಸವಿದ್ದರು. ಬೈ ಎಲೆಕ್ಷನ್​ ರಿಸಲ್ಟ್​ ಬಂದ ಬಳಿಕ ಮೇ 3ರಂದು ವಿಜಯಶ್ರೀಗೆ ಕರೊನಾ ಸೋಂಕು ದೃಢಪಟ್ಟಿತ್ತು. ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಶ್ರೀ, ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net