

ಬಾಗಲಕೋಟೆ: ಮಹಾಮಾರಿ ಕರೊನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿರುವ ಸಾವಿನ ಸರಣಿ ಜಿಲ್ಲೆಯಲ್ಲಿ ಮುಂದುವರಿದಿದೆ. ಇಂದು ದೇವನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಮುಖ್ಯ ಶಿಕ್ಷಕ ಬಿ.ಎಚ್. ಬಾಲರೆಡ್ಡಿ(52) ಕರೊನಾದಿಂದ ಮೃತಪಟ್ಟಿದ್ದಾರೆ.
ಮೇ 1ರಿಂದ 10ರವರೆಗೆ ಈಗಾಗಲೇ 10 ಮಂದಿ ಶಿಕ್ಷಕರು ಜಿಲ್ಲೆಯಲ್ಲಿ ಕೋವಿಡ್ ಬಲಿಯಾಗಿದ್ದಾರೆ. ಈ ಪೈಕಿ ಜಮಖಂಡಿ ತಾಲೂಕಿನಲ್ಲಿ ಮೂವರು, ಮುಧೋಳ ಮತ್ತು ಹುನಗುಂದ ತಾಲೂಕಿನಲ್ಲಿ ತಲಾ ಇಬ್ಬರು, ಬಾಗಲಕೋಟೆ, ಬೀಳಗಿ, ಬಾದಾಮಿ ತಾಲೂಕಿನಲ್ಲಿ ತಲಾ ಒಬ್ಬರು ಶಿಕ್ಷಕರು. ಇವರ ಜತೆಗೆ ಬಾಗಲಕೋಟೆ ತಾಲೂಕಿನಲ್ಲಿ ಒಬ್ಬರು ಬೋಧಕೇತರ ಸಿಬ್ಬಂದಿಯೊಬ್ಬರು ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಬಾಗಲಕೋಟೆ ಡಿಡಿಪಿಐ ಶ್ರೀಶೈಲ ಬಿರಾದಾರ ಮಾಹಿತಿ ನೀಡಿದ್ದಾರೆ. ಮೇ 10ರ ನಂತರ ಈ ಐದು ದಿನಗಳಲ್ಲಿ ಮೃತಪಟ್ಟವರ ಮಾಹಿತಿ ಇನ್ನೂ ಸಂಗ್ರಹ ಆಗಿಲ್ಲ.