

ನಿರೂಪಣೆ: ಅರುಣ ಎಂ.ಜಿ.
ನಮ್ಮ ದೇಶದಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಕರೊನಾ ವ್ಯಾಕ್ಸಿನ್ ಹಾಕಿಲ್ಲ. ಈ ಅಂಶವನ್ನೇ ಪರಿಗಣಿಸಿ ನೋಡಿದಾಗ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಬಹುಶಃ ತೊಂದರೆ ಆಗಬಹುದು. ಮಕ್ಕಳಿಗೂ ವ್ಯಾಕ್ಸಿನ್ ಕೊಡುವುದು ಹೇಗೆ ಎಂದು ಟ್ರಯಲ್ ನಡೆಯುತ್ತಿದೆ. ಯಾವುದೇ ಕೆಟಗರಿ ಆಗಲಿ ವ್ಯಾಕ್ಸಿನ್ ಹಾಕಿಸಿಕೊಳ್ಳದ ವ್ಯಕ್ತಿಗಳೇ ಸೂಪರ್ ಸ್ಪ್ರೆಡರ್ ಆಗ್ತಾರೆ. ಅಲ್ಲದೆ ಅವರಲ್ಲಿ ರೋಗದ ತೀವ್ರತೆ ಹೆಚ್ಚಿರುತ್ತೆ. ಒಂದು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡವರೇನೂ ಸೇಫಲ್ಲ. ಎರಡು ಡೋಸ್ ಹಾಕಿಸಿಕೊಳ್ಳಲೇಬೇಕು. 1 ಮತ್ತು 2ನೇ ಅಲೆಯಲ್ಲಿ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಮಕ್ಕಳ ಪ್ರಮಾಣ ಕಡಿಮೆ ಎಂಬುದು ಸಮಾಧಾನಕರ. ಎಷ್ಟೇ ಅಲೆ ಬಂದರೂ ಕರೊನಾ ವಿರುದ್ಧ ಗೆಲ್ಲಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ಅಸ್ತ್ರವನ್ನ ಬಳಸಲೇಬೇಕು.
ವಿಶೇಷ ಸಲಹೆ: ನಿಮ್ಮ ಮಗುವಿಗೆ ಯಾವುದಾದರೂ ದೀರ್ಘಕಾಲಿಕ ಕಾಯಿಲೆ ಇದ್ದಲ್ಲಿ, ಅಂದರೆ ಥೈರಾಯ್್ಡ ಡಯಾಬಿಟಿಸ್, ಹೃದಯಸಂಬಂಧಿ ಕಾಯಿಲೆ, ಎಚ್ಐವಿ, ಅಂಗಾಂಗದ ಕೊರತೆ, ಕ್ರಾನಿಕ್ ಡಿಸೀಸ್ ಇದ್ದರೆ, ರೋಗದ ತೀವ್ರತೆ ಹೆಚ್ಚು. ಇದನ್ನ ತಡೆಯಲು ಈಗಿನಿಂದಲೇ ಆರೋಗ್ಯದತ್ತ ಗಮನ ಹರಿಸಬೇಕು. ಲಾಕ್ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರು ನಿಮ್ಮ ವೈದ್ಯರನ್ನ ದೂರವಾಣಿ ಮೂಲಕವಾದರೂ ಸಂರ್ಪಸಿ ಮಗುವಿನ ಆರೋಗ್ಯದ ಬಗ್ಗೆ ತಿಳಿಸಿ ವೈದ್ಯರ ಸಲಹೆ ಮೇರೆಗೆ ಔಷಧ ಮುಂದುವರಿಸಬೇಕು. ಇಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮದತ್ತ ಗಮನ ಹರಿಸಿ.
ವ್ಯಾಕ್ಸಿನ್ ಅಗತ್ಯ: ಕರೊನಾ ವ್ಯಾಕ್ಸಿನ್ ಹಾಕಿಸಿ ಕೊಂಡವರು ಮತ್ತು ಈಗಾಗಲೇ ಸೋಂಕು ಬಂದು ಗುಣವಾದವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತೆ. ಇಂತಹವರಲ್ಲಿ ವೈರಲ್ ಲೋಡ್ ಕಡಿಮೆ ಇದ್ದು, ಸೋಂಕು ತಗುಲಿದರೂ ಹೆಚ್ಚು ತೀವ್ರತೆ ಇರುವುದಿಲ್ಲ. ಇತರರಿಗೆ ಸ್ಪ್ರೆಡ್ ಆಗುವ ಸಾಧ್ಯತೆಯೂ ಕಡಿಮೆ. ವ್ಯಾಕ್ಸಿನ್ನಿಂದ ರೋಗದ ತೀವ್ರತೆ, ಸಾವಿನ ಪ್ರಮಾಣ, ಐಸಿಯುಗೆ ಅಡ್ಮಿಟ್ ಆಗುವ ಸಾಧ್ಯತೆ ಕಡಿಮೆ. ಹೊಸದಾಗಿ ಮಕ್ಕಳಿಗೂ ವ್ಯಾಕ್ಸಿನ್ ಹಾಕಿಸುವ ಅವಕಾಶ ಲಭ್ಯವಾದಾಗ ಹಿಂಜರಿಕೆ ಬೇಡ.