ಗರ್ಭಿಣಿಯರಿಗೆ ಖುದ್ದು ಕರೊನಾ ಲಸಿಕೆ ಹಾಕಿದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್

1134188
Published on

ಬೆಳಗಾವಿ: ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು 10ಕ್ಕೂ ಹೆಚ್ಚು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ಕೋವ್ಯಾಕ್ಸಿನ್ ಲಸಿಕೆ ನೀಡಿದರು.

ಸ್ತ್ರೀರೋಗ ತಜ್ಞೆಯೂ ಆಗಿರುವ ಡಾ.ಅಂಜಲಿ ನಿಂಬಾಳ್ಕರ್, ಶಾಸಕಿ ಆದ ಬಳಿಕ ಅಭ್ಯಾಸ ನಿಲ್ಲಿಸಿದ್ದರು. ಶುಕ್ರವಾರ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಖುದ್ದು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ಕರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. ಹೆರಿಗೆ ಆಗುವ ತನಕ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ತಿಳಿ ಹೇಳಿದರು.

ಗರ್ಭಿಣಿಯರು ಲಸಿಕೆ ಪಡೆಯಬಹಯದು ಎಂದು ತಜ್ಞರು ಹೇಳಿದರೂ ಲಸಿಕೆ ಪಡೆಯಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಗರ್ಭಿಣಿಯರಿಗೆ ಲಸಿಕೆಯ ಮಹತ್ವ ಹಾಗೂ ಆರೋಗ್ಯ ರಕ್ಷಣೆ ಬಗ್ಗೆ ಖುದ್ದು ಶಾಸಕಿಯೇ ಅರಿವು ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net