ನೀರು ಕೇಳಿದ್ರೆ ಬಾಟಲಿಗೆ ಮೂತ್ರ ತುಂಬಿಕೊಟ್ಟ ಎಸ್​ಐ! ಡಿಸಿಪಿ ಸೂಚನೆ ಮೇರೆಗೆ ಎಸಿಪಿ ತನಿಖೆ, ವರದಿಯಲ್ಲಿ ಏನಿದೆ?

New Project (36)
Published on

ಬೆಂಗಳೂರು: ಆರೋಪಿಯೊಬ್ಬನ್ನು ಠಾಣೆಗೆ ಕರೆತಂದು ಎಫ್​ಐಆರ್​ ದಾಖಲಿಸದೆ ಮನಸೋ ಇಚ್ಛೆ ಥಳಿಸಿದ್ದಲ್ಲದೇ, ಕುಡಿಯಲು ನೀರು ಕೇಳಿದ ಆರೋಪಿಗೆ ಬಾಟಲಿಗೆ ಮೂತ್ರ ತುಂಬಿ ಕೊಟ್ಟಿದ್ದರು ಎಂದು ಬ್ಯಾಟರಾಯನಪುರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಹರೀಶ್​ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ಪಾದರಾಯನಪುರ ನಿವಾಸಿ ತೌಸೀಫ್​ ಎಂಬಾತನಿಗೆ ಬ್ಯಾಟರಾಯನಪುರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಹರೀಶ್​ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪದ ಕುರಿತು ಡಿಸಿಪಿ ಸೂಚನೆ ಮೇರೆಗೆ ಎಸಿಪಿ ತನಿಖೆ ನಡೆಸಿದ್ದಾರೆ.

ತೌಸೀಫ್​ ಪಾಷಾನನ್ನು ವಶಕ್ಕೆ ಪಡೆದಿದ್ದ ಎಸ್​ಐ ಹರೀಶ್​, ಠಾಣೆಗೆ ಕರೆತಂದು ಎಫ್​ಐಆರ್​ ದಾಖಲಿಸದೇ ಮನಸೋ ಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್​ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಟ್ವಿಟರ್​ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಸಂಜೀವ ಪಾಟೀಲ್​, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯಗೆ ಸೂಚಿಸಿದ್ದರು. ಹಲ್ಲೆಗೊಳಗಾದ ತೌಸೀಫ್​ ಹಾಗೂ ಹಲ್ಲೆ ಮಾಡಿದ ಎಸ್​ಐ ಹರೀಶ್​ ಅವರನ್ನು ವಿಚಾರಣೆ ನಡೆಸಿರುವ ಎಸಿಪಿ, ತನಿಖೆ ಮುಕ್ತಾಯಗೊಳಿಸಿದ್ದು, ಇಂದು(ಸೋಮವಾರ) ಡಿಸಿಪಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಬಳಿಕ ಆ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net