ಉಚಿತ ಬ್ಲ್ಯಾಂಕೆಟ್‌ಗಾಗಿ ಮುಗಿಬಿದ್ದ ಜನ, ಮಳೆಯನ್ನೂ ಲೆಕ್ಕಿಸದೆ ಹೊತ್ತೊಯ್ದರು!

Blanket Rain Suresh Gowda
Published on

ತುಮಕೂರು: ಧಾರಾಕಾರ ಮಳೆ ಸುರಿಯುತ್ತಿದ್ದರೂ ಜನ ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದು ಬ್ಲ್ಯಾಂಕೆಟ್‌ಗಳನ್ನ ಹೊತ್ತೊಯ್ಯುತ್ತಿದ್ದ ದೃಶ್ಯ ಗೂಳೂರಿನಲ್ಲಿ ಭಾನುವಾರ ಮಧ್ಯಾಹ್ನ ಕಂಡು ಬಂತು.

ಇಂದು(ಅ.10) ಮಾಜಿ ಶಾಸಕ ಬಿ.ಸುರೇಶ್​ ಗೌಡ ಅವರ ಜನ್ಮದಿನ. ಈ ಪ್ರಯುಕ್ತ ಗೂಳೂರಿನಲ್ಲಿ ಬೃಹತ್​ ಕಾರ್ಯಕ್ರಮ ಆಯೋಜಿಸಿದ್ದ ಸುರೇಶ್ ಗೌಡ, ಜನರಿಗೆ ಉಚಿತ ಬೆಡ್​ಶೀಟ್ ವಿತರಣೆ ಮಾಡಿದ್ರು. ಕಾರ್ಯಕ್ರಮದ ವೇಳೆ ಮಳೆ ಬಂದರೂ ಲೆಕ್ಕಿಸದೆ ಜನ ಬ್ಲ್ಯಾಂಕೆಟ್‌​ಗಾಗಿ ಮುಗಿಬಿದ್ದರು. ಕೆಲವರು ಮೂರ್ನಾಲ್ಕು ಬ್ಲ್ಯಾಂಕೆಟ್‌ಗಳನ್ನು ಎತ್ತಿಕೊಂಡು ಹೋದರು.

ತುಮಕೂರು ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚಿಗೆ ರಾಜೀನಾಮೆ ನೀಡಿದ್ದ ಸುರೇಶ್​ಗೌಡ, ಇಂದು ತಮ್ಮ ಹುಟ್ಟುಹಬ್ಬ ಆಚರಣೆ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿ ಸಹಸ್ರಾರು ಬೆಂಬಲಿಗರನ್ನ ಒಂದೆಡೆ ಸೇರಿಸುವ ಕಾರ್ಯ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net