ಮೊಗವೀರಪೇಟೆಯಲ್ಲಿ 24 ಗಂಟೆ ನಿರಂತರ ಕೋಲ: 17 ದೈವಗಳಿಗೆ ಸಿರಿ ಸಿಂಗಾರ ಸೇವೆ

siri singara
ಶ್ರೀ ಕ್ಷೇತ್ರ ಮೊಗವೀರಪೇಟೆ ಸಾನ್ನಿಧ್ಯದಲ್ಲಿ ದೈವಗಳ ಸಿರಿಸಿಂಗಾರ ಕೋಲ ಸೇವೆ ನಡೆಯಿತು.
Published on

ಕೊಕ್ಕರ್ಣೆ: ಶ್ರೀ ಕ್ಷೇತ್ರ ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗಬ್ರಹ್ಮ, ಶ್ರೀ ಪರಿವಾರ ದೇವತಾ ಬೊಬ್ಬರ್ಯೇಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನದಿಂದ ಶ್ರೀ ಮಲಸಾವರಿ ಪರಿವಾರ, ಶ್ರೀ ವರ್ತೆ ಪಂಜುರ್ಲಿ ಪರಿವಾರ, ಶ್ರೀ ಜೈನರ ಹೈಗುಳಿ ಪರಿವಾರ ಹಾಗೂ ಕೊರಗಜ್ಜ ದೈವಗಳ ಸಾನ್ನಿಧ್ಯದಲ್ಲಿ ಜ್ಯೋತಿ ಮತ್ತು ಕೃಷ್ಣಪ್ರಸಾದ್ ಕುಟುಂಬಸ್ಥರ ಸೇವಾರ್ಥ ಸಿರಿ ಸಿಂಗಾರ ಕೋಲ ಸೇವೆ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು. ಅನ್ನಸಂತರ್ಪಣೆ, ಭಂಡಾರ ಮೆರವಣಿಗೆ, ಕೋಲ ಸೇವೆ, ರಾಹು, ಗುಳಿಗ ಮತ್ತು ಕೊರಗಜ್ಜ ದೈವಗಳ ಕೋಲ ಸೇವೆ ನೆರವೇರಿತು. ನಿರಂತರ 24 ತಾಸು ಕೋಲ ಜರುಗಿದೆ.

ಶ್ರೀಮಲಸಾವರಿ, ಶ್ರೀಮಹಾಕಾಳಿ, ಶ್ರೀಧೂಮಾವತಿ, ಶ್ರೀವರ್ತೆ, ಶ್ರೀಪಂಜುರ್ಲಿ, ಶ್ರೀರಕ್ತ ಹೈಗುಳಿ, ಶ್ರೀಜುಮಾದಿ, ಶ್ರಾಗಾಮ, ಶ್ರೀಬೈಕಾಡ್ತಿ, ಶ್ರೀಜೈನರ ಹೈಗುಳಿ, ಶ್ರೀಜಟ್ಟಿಗ, ಶ್ರೀಗೂಳಿ ಹೈಗುಳಿ, ಶ್ರೀಜಾರಂದಾಯ, ಶ್ರೀನೇತ್ರ ಹೈಗುಳಿ, ಶ್ರೀರಾಹು, ಶ್ರೀಗುಳಿಗ, ಶ್ರೀಕೊರಗಜ್ಜ ದೈವಗಳ ಕೋಲ ಸೇವೆ ಜರುಗಿತು.
ದೇವಸ್ಥಾನದ ಮೊಕ್ತೇಸರ ಎಂ.ಆನಂದ ಮರಕಾಲ, ಸೇವಾದಾರರು, ಗುರಿಕಾರರು, ಆಡಳಿತ ಮಂಡಳಿಯವರು, ಅರ್ಚಕರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net