ವಿಶಾಲ ಗಾಣಿಗ ಕೊಲೆ ಪ್ರಕರಣ: 3 ವರ್ಷದ ಬಳಿಕ ಆರೋಪಿ ಬಂಧನ

arrest
Published on

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡು ಖಾಸಗಿ ರೆಸಿಡೆನ್ಸಿಯಲ್ಲಿ 2021ನೇ ಜುಲೈ ತಿಂಗಳಿನಲ್ಲಿ ನಡೆದಿದ್ದ ವಿಶಾಲ ಗಾಣಿಗ ಎಂಬ ಮಹಿಳೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಧರ್ಮೇಂದ್ರ ಕುವಾರ್ ಸುಹಾನಿ ಬಂಧಿತ ಆರೋಪಿ. ಈತ ಪ್ರಮುಖ ಆರೋಪಿ ವಿಶಾಲ ಗಂಡ ರಾಮಕೃಷ್ಣನಿಗೆ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್‌ನನ್ನು ಪರಿಚಯಿಸಿ ಕೊಲೆಗೆ ಸಹಕರಿಸಿದ್ದ. 3 ವಷರ್ಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇವನನ್ನು 2ರಂದು ಲಖನೌ ಅಂತರಾಷ್ಟ್ರೀಯ ವಿವಾನ ನಿಲ್ದಾಣದಲ್ಲಿ ಬ್ರಹ್ಮಾವರ ಠಾಣಾ ಪಿಎಸ್‌ಐ ಮಧು ಬಿ.ಇ ಹಾಗೂ ಠಾಣಾ ಸಿಬ್ಬಂದಿ ಶಾಂತರಾಜ್ ಎಎಸ್‌ಐ, ಸುರೇಶ ಬಾಬು ವಶಕ್ಕೆ ಪಡೆದು 3ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ವಿಶಾಲ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಆಕೆಯ ಗಂಡ ರಾಮಕೃಷ್ಣ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್‌ನನ್ನು ಈಗಾಗಲೆ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net