

ಓಟಿಟಿ ವೇದಿಕೆ ಡಿಸ್ನಿ ಹಾಟ್ಸ್ಟಾರ್ ಇದೀಗ ಸರಣಿ ಸಿನಿಮಾಗಳನ್ನು ಮತ್ತೆ ಘೋಷಿಸಿಕೊಂಡಿದೆ. ಈಗಾಗಲೇ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಬೇಕಿರುವ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿರುವ ಡಿಸ್ನಿ ಹಾಟ್ಸ್ಟಾರ್ ಇದೀಗ ನವರಾತ್ರಿ ಪ್ರಯುಕ್ತ ಐದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು ಹೇಳಿಕೊಂಡಿದೆ.
ನವರಾತ್ರಿ ಅಂದರೆ ಅದು ದೇವಿಯರ ಹಬ್ಬ. ದೇವತೆಗಳನ್ನೇ ಈ ಹಬ್ಬದ ಸಂಭ್ರಮದಲ್ಲಿ ಪೂಜಿಸುತ್ತಾರೆ. ಇದೀಗ ಇದೇ ಹಬ್ಬದ ಪ್ರಯುಕ್ತ ಟಾಪ್ ನಟಿಯರ ನಾಯಕಿ ಪ್ರಧಾನ ಸಿನಿಮಾಗಳನ್ನೇ ಡಿಸ್ನಿ ಘೋಷಿಸಿಕೊಂಡಿದೆ. ನಯನತಾರಾ, ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಸಿನಿಮಾಗಳು ಈ ಬಿಡುಗಡೆಯ ಪಟ್ಟಿಯಲ್ಲಿವೆ.
ಹೌದು, ನಯನತಾರಾ ನಟಿಸಿರುವ ಮೂಕುತಿ ಅಮ್ಮನ್ ಚಿತ್ರ, ಕಾಜಲ್ ಅಗರ್ವಾಲ್ ನಟಿಸಿರುವ ಲೈವ್ ಟೆಲಿಕಾಸ್ಟ್ ವೆಬ್ ಸಿರೀಸ್, ತಮನ್ನ ಭಾಟಿಯಾ ನವೆಂಬರ್ ಸ್ಟೋರಿ ವೆಬ್ ಸಿರೀಸ್ ಸೇರಿ ಟ್ರಿಪಲ್ಸ್, ಮೈ ಫರ್ಫೆಕ್ಟ್ ಹಸ್ಬಂಡ್, ಚಿತ್ರಗಳು ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿವೆ.
ಸದ್ಯ ಈ ಎಲ್ಲ ಚಿತ್ರಗಳ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯ ದಿನಾಂಕವನ್ನೂ ಡಿಸ್ನಿ ಘೋಷಿಸಿಕೊಳ್ಳಲಿದೆ. (ಏಜೆನ್ಸೀಸ್)