More

    ಆರ್​ಆರ್​ಆರ್​ ಟೀಸರ್​; ಗೆದ್ದ ಜೂ. ಎನ್​ಟಿಆರ್​, ಸೋತ ರಾಮ್​ಚರಣ್​

    ಹೈದರಾಬಾದ್: ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿದೆ. ಈ ಮಧ್ಯೆ, ಅಕ್ಟೋಬರ್​ 22ರಂದು ಇನ್ನೊಂದು ಟೀಸರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಜೂ. ಎನ್​ಟಿಆರ್ ಅವರನ್ನು ಪರಿಚಯಿಸುವ ಟೀಸರ್ ಬಿಡುಗಡೆಯಾಗಿದೆ. ಆದರೆ, ಈ ಟೀಸರ್​ ವಿಚಾರದಲ್ಲಿ ಗೆದ್ದಿದ್ದು ಮಾತ್ರ ಜೂ. ಎನ್​ಟಿಆರ್!

    ಇದನ್ನೂ ಓದಿ: ‘ಬ್ಲಾಂಕ್’ ಆಗಿದ್ದಾರೆ ಕೃಷಿ ತಾಪಂಡ … ಮುಂದೇನು?

    ಹೌದು, ಮಾರ್ಚ್​ 27ರಂದು ರಾಮ್​ಚರಣ್​ ತೇಜ ಅವರ ಭೀಮ್ ಫಾರ್ ರಾಮರಾಜು ಪಾತ್ರವನ್ನು ಪರಿಚಯಿಸುವ ವಿಡಿಯೋ ಟೀಸರ್ ಬಿಡುಗಡೆ ಆಗಿತ್ತು. ಆ ಟೀಸರ್​ಗೆ 24 ಗಂಟೆಯಲ್ಲಿ ತೆಲುಗು ಅವತರಣಿಕೆಯನ್ನು 7 ಮಿಲಿಯನ್​ ಜನರಿಂದ ವೀಕ್ಷಣೆಯಾಗಿತ್ತು. ಎಲ್ಲ ಭಾಷೆಗಳ ಟೀಸರ್​ ಸೇರಿದರೆ, 24 ಗಂಟೆಗಳಲ್ಲಿ 15 ಮಿಲಿಯನ್​ ವೀಕ್ಷಣೆ ಕಂಡಿತ್ತು. ಈಗ ಆ ದಾಖಲೆಯನ್ನು ಜೂ.ಎನ್​ಟಿಆರ್ ಟೀಸರ್ ಮುರಿದಿದೆ.

    ಹೌದು, ಅ. 22ರಂದು ಜೂ. ಎನ್​ಟಿಆರ್​ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿದೆ. ಕೇವಲ 24 ಗಂಟೆಗಳಲ್ಲಿ ತೆಲುಗು ಟೀಸರ್​ವೊಂದೆ ಬರೋಬ್ಬರಿ 14 ಮಿಲಿಯನ್​ ವೀಕ್ಷಣೆ ದಾಖಲಿಸಿದೆ. ಈ ಮೂಲಕ ರಾಮ್​ಚರಣ್​ ಅವರನ್ನು ಹಿಂದಿಕ್ಕಿ ಎನ್​ಟಿಆರ್​ ಮುನ್ನುಗ್ಗಿದ್ದಾರೆ.

    ಇದನ್ನೂ ಓದಿ: ಪಾತ್ರ ಮಾಡಿದ್ದಷ್ಟೇ ಅಲ್ಲ, ಕನ್ನಡದಲ್ಲಿ ಮಾತಾಡಿದ್ರಂತೆ ಬಾಬು …

    ಈ ಹಿಂದೆ, ರಾಮ್​ಚರಣ್​ ಅವರ ಟೀಸರ್​ಗೆ ಜ್ಯೂನಿಯರ್​ ಎನ್​ಟಿಆರ್ ಧ್ವನಿ ನೀಡಿದ್ದರು. ಇದೀಗ ಜ್ಯೂನಿಯರ್​ ಎನ್​ಟಿಆರ್​ ಟೀಸರ್​ಗೆ ರಾಮ್​ಚರಣ್​ ತೇಜ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ಟೀಸರ್​ ತೆಲುಗು, ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಿಗೂ ರಾಮ್​ಚರಣ್​ ಧ್ವನಿ ನೀಡಿದ್ದಾರೆ. ಈಗಾಗಲೇ ಈ ಟೀಸರ್​ಗಳು ಯೂಟ್ಯೂಬ್​ನಲ್ಲಿ ಸಖತ್​ ವೀಕ್ಷಣೆ ಕಾಣುತ್ತಿವೆ.

    ಟಾಲಿವುಡ್ ಸ್ಪೆಷಲ್​: ಹೊಸ ವರ್ಷಕ್ಕೆ ಹೊಸ ಚಿತ್ರಗಳ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts